ಶಿವಮೊಗ್ಗ: ಅಬ್ಬಿಫಾಲ್ಸ್ ನಲ್ಲಿ ಫೋಟೋ ತೆಗೆಸಿಕೊಳ್ಳಲು ಹೋಗಿದ್ದ ವ್ಯಕ್ತಿ ನೀರು ಪಾಲಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಯಡೂರು ಸಮೀಪದ ಅಬ್ಬಿ ಫಾಲ್ಸ್ ನಲ್ಲಿ ಘಟನೆ ನಡೆದಿದೆ.
ರಮೇಶ್(35) ನೀರು ಪಾಲಾದವರು ಎಂದು ಹೇಳಲಾಗಿದೆ. ರಮೇಶ್ ಬೆಂಗಳೂರಿನ ನಾಗರಬಾವಿಯ ಖಾಸಗಿ ಕಂಪನಿಯ ಮ್ಯಾನೇಜರ್ ಆಗಿದ್ದಾರೆ. ಐವರು ಸ್ನೇಹಿತರ ಜೊತೆಗೆ ಪ್ರವಾಸಕ್ಕೆ ಬಂದಿದ್ದ ವೇಳೆ ರಮೇಶ್ ಪೋಟೋ ತೆಗೆಸಿಕೊಳ್ಳುವಾಗ ನೀರುಪಾಲಾಗಿದ್ದಾರೆ.
ಫಾಲ್ಸ್ ತುದಿಯಲ್ಲಿ ಬಂಡೆಯೊಂದರ ಮೇಲೆ ರಮೇಶ್ ಕುಳಿತುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ತಮ್ಮ ಎರಡೂ ಕೈಗಳನ್ನು ಮೇಲೆತ್ತಿ ಸಂಭ್ರಮಿಸುವಾಗ ಬಂಡೆಯಿಂದ ಜಾರಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಫಾಲ್ಸ್ ಕೆಳಬಾಗದಲ್ಲಿ ರಮೇಶ್ ಮೃತದೇಹ ಪತ್ತೆಯಾಗಿದೆ. ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.