ಬಾಗಲಕೋಟೆ : ಬಾಗಲಕೋಟೆಯಲ್ಲಿ ಘೋರ ದುರಂತ ಸಂಭವಿಸಿದ್ದು, ಸ್ನಾನಕ್ಕೆಂದು ನದಿಗೆ ತೆರಳಿದ ಮೂವರು ಬಾಲಕರು ನೀರುಪಾಲಾಗಿರುವ ಘಟನೆ ನಡೆದಿದೆ.
ಬಾಗಲಕೋಟೆಯ ಇಲಿಯಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಗ್ರಾಮದ ಸೋಮಶೇಖರ ದೇವರಮನಿ (15) ಪರನಗೌಡ ಬೀಳಗಿ (17) ಮಲ್ಲಪ್ಪ ಬಗಲಿ (15) ಎಂದು ಗುರುತಿಸಲಾಗಿದೆ. ದೇವರ ಪಲ್ಲಕ್ಕಿ ಉತ್ಸವದ ವೇಳೆ ಕೃಷ್ಣಾ ನದಿ ಬಳಿ ಸ್ನಾನಕ್ಕೆ ಹೋದ ಬಾಲಕರು ಮೃತಪಟ್ಟಿದ್ದಾರೆ.