ರಾಯಚೂರು: ಮಂತ್ರಾಲಯಕ್ಕೆ ಬಂದಿದ್ದ ಮೂವರು ಯುವಕರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗ್ಗೆ 10 ಗಂಟೆಯಿಂದ ಪತ್ತೆ ಕಾರ್ಯ ಆರಂಭವಾಗಲಿದೆ.
ಮಂತ್ರಾಲಯ ಪೊಲೀಸರು, ಶ್ರೀಮಠದ ಸಿಬ್ಬಂದಿ ಶ್ರೀಮಠದ ಪಕ್ಕದ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆ ಹೋದಾಗ ಕಣ್ಮರೆಯಾಗಿದ್ದ ಮೂವರಿಗಾಗಿ ಹುಡುಕಾಟ ನಡೆಸಲಿದ್ದಾರೆ.
ಅಜಿತ್(19), ಸಚಿನ್(20), ಪ್ರಮೋದ್(20) ನಾಪತ್ತೆಯಾದ ವಿದ್ಯಾರ್ಥಿಗಳು. ಇವರು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜಾವಗಲ್ ಗ್ರಾಮದ ನಿವಾಸಿಗಳಾಗಿದ್ದಾರೆ. ಪದವಿ ಓದುತ್ತಿದ್ದ ಸ್ನೇಹಿತರ ತಂಡ ನಿನ್ನೆ ಮಂತ್ರಾಲಯಕ್ಕೆ ಬಂದಿದ್ದರು.
ತುಂಗಭದ್ರಾ ನದಿಯ ಬಳಿಯ ಐವರು ಸ್ನಾನ ಮಾಡುವಾಗ ಅವಘಡ ಸಂಭವಿಸಿದೆ. ನೀರಿನ ರಭಸಕ್ಕೆ ಮೂವರು ವಿದ್ಯಾರ್ಥಿಗಳು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಮಂತ್ರಾಲಯದಲ್ಲಿ ಮಳೆ ಹಿನ್ನೆಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಮಂತ್ರಾಲಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.