ಬೆಂಗಳೂರು: ಹಸುಗಳ ಕತ್ತು ಕೊಯ್ದು ನಡುರಸ್ತೆಯಲ್ಲಿ ಬಿಸಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್(30), ಸೈಯದ್ ನವಾಜ್(35) ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಸೇತುವೆಯ ಮೇಲೆ ಎರಡು ನಾಟಿ ಹಸುಗಳ ಮೃತದೇಹ ಪತ್ತೆಯಾಗಿತ್ತು. ಬಂಧಿತ ಆರೋಪಿಗಳು ಹಸುಗಳ ಕತ್ತು ಕೊಯ್ದಿದ್ದು, ಮೈಯೆಲ್ಲಾ ಗಾಯದ ಗುರುತುಗಳು ಕಂಡು ಬಂದಿದ್ದವು. ಹಸುಗಳ ಕತ್ತು ಕೊಯ್ದ ಪ್ರಕರಣದ ಬಗ್ಗೆ ಸದನದಲ್ಲಿಯೂ ಚರ್ಚೆಯಾಗಿತ್ತು.
ಹಸು ಕಡಿದು ಮಾಂಸ ಮಾರಲು ಕೇರಳಕ್ಕೆ ಹಸುಗಳನ್ನು ಬಂಧಿತರು ಸಾಗಿಸುತ್ತಿದ್ದರು. ಈ ವೇಳೆ ಎರಡು ಹಸುಗಳ ಮಾಂಸ ತಿನ್ನಲು ಯೋಗ್ಯವಲ್ಲ ಎಂದು ಗೊತ್ತಾಗಿದ್ದರಿಂದ ಎರಡು ಹಸುಗಳ ಕತ್ತು ಕೊಯ್ದು ನಡುರಸ್ತೆಯಲ್ಲೇ ಹೋಗಿದ್ದರು ಎನ್ನಲಾಗಿದೆ.
You Might Also Like
TAGGED:ಹಸು