ಕಲಬುರಗಿ: ಕಲಬುರಗಿ ನಗರದ ಹೊರವಲಯದ ಬೀದರ್ -ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್ ಕಾರ್ ಮತ್ತು ಬೈಕ್ ನಡುವೆ ಡಿಕ್ಕಿಯಾಗಿ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ.
ಅಂಕಲಗಿ ಪೆಟ್ರೋಲ್ ಪಂಪ್ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಮೇಲೆ ತೆರಳುತ್ತಿದ್ದ ಶಿರಡೋಣ ಗ್ರಾಮದ ನಾಗಪ್ಪ ಅಮೃತಪ್ಪ, ಶಿವಾನಂದ ಅಪ್ಪಾರಾವ್ ಮೃತಪಟ್ಟಿದ್ದಾರೆ. ಮಹಿಳೆ ಸೇರಿ ಕಾರ್ ನಲ್ಲಿದ್ದ ಇಬ್ಬರು ಕೂಡ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಜಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಶಿರಡೋಣ ಗ್ರಾಮದ ಮೂವರು ಕೂಲಿ ಕೆಲಸ ಮುಗಿಸಿಕೊಂಡು ಗ್ರಾಮಕ್ಕೆ ಒಂದೇ ಬೈಕ್ ಮೇಲೆ ಹಿಂತಿರುಗುತ್ತಿದ್ದರು. ಬೈಕ್ ನಲ್ಲಿದ್ದ ಇನ್ನೊಬ್ಬ ಸವಾರ ಉತ್ತಮ್ ಮೈಲಾರಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
