ಬೆಂಗಳೂರು: ಬೆಂಗಳೂರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಎಂಬಿಎ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಗಾಯತ್ರಿನಗರದ ರೈಲ್ವೆ ಪ್ಯಾರಲಲ್ ರಸ್ತೆಯ ಮನೆಯಲ್ಲಿ ಎಂಬಿಎ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ.
ದಾವಣಗೆರೆ ಮೂಲದ ಸುಪ್ರಿಯಾ(25) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಬೈಕ್ ರೈಡಿಂಗ್ ತರಬೇತಿ ಪಡೆಯುತ್ತಿದ್ದ ಸುಪ್ರಿಯಾ ವಾಸವಾಗಿದ್ದ ಕೊಠಡಿ ಎರಡು ದಿನದಿಂದ ಲಾಕ್ ಆಗಿತ್ತು. ಸುಪ್ರಿಯಾ ಅವರಿಗೆ ಪೋಷಕರು ಕರೆ ಮಾಡಿದಾಗ ಸ್ವೀಕರಿಸುತ್ತಿರಲಿಲ್ಲ. ಮನೆಯ ಮಾಲೀಕರಿಗೆ ಕರೆ ಮಾಡಿ ಪೋಷಕರು ವಿಷಯ ತಿಳಿಸಿದ್ದಾರೆ. ಕೊಠಡಿ ಬಾಗಿಲು ತೆಗೆದು ನೋಡಿದಾಗ ಸುಪ್ರಿಯಾ ಶವ ಪತ್ತೆಯಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಮೃತದೇಹ ಶಿಫ್ಟ್ ಮಾಡಲಾಗಿದೆ. ಸದ್ಯಕ್ಕೆ ಯುಡಿಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸಿದ್ದಾರೆ.
