BREAKING : ‘ಸಿಎಂ ಸಿದ್ದರಾಮಯ್ಯ’ ನಿವಾಸದ ಮೇಲೆ ಕಲ್ಲು ತೂರಾಟ : ಆರೋಪಿ ಪೊಲೀಸ್ ವಶಕ್ಕೆ

ಮೈಸೂರು : ಸಿಎಂ ಸಿದ್ದರಾಮಯ್ಯ ಮನೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಸಿಎಂ ನಿವಾಸದ ಮೇಲೆ ಸತ್ಯಮೂರ್ತಿ ಎಂಬಾತ ಕಲ್ಲು ತೂರಾಟ ನಡೆಸಿದ್ದನು. ಈ ಸಂಬಂಧ ಸರಸ್ವತಿಪುರ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು. ನಂತರ ತನಿಖೆ ನಡೆಸಿದ ಪೊಲೀಸರು ಆರೋಪಿ ಸತ್ಯಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಸತ್ಯಮೂರ್ತಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದ್ದು, ಈ ಹಿಂದೆ ಕೂಡ ವಿಧಾನಸಭೆ ಚುನಾವಣೆ ವೇಳೆ ಈತ ವೋಟಿಂಗ್ ಮೆಷಿನ್ ಒಡೆದು ಹಾಕಿದ್ದನು ಎಂದು ಹೇಳಲಾಗಿದೆ. ಸದ್ಯ ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read