ಯಾದಗಿರಿ: ಅಕ್ರಮ ಸಂಬಂಧ ಆರೋಪದಡಿ ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯ ನಡೆಸಲಾಗಿದೆ. ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಚಾಮನಾಳ ತಾಂಡಾದಲ್ಲಿ ಘಟನೆ ನಡೆದಿದೆ.
ಅಕ್ಟೋಬರ್ 16ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 35 ವರ್ಷದ ಮಹಿಳೆ ಮೇಲೆ 11 ಜನರು ದೌರ್ಜನ್ಯ ನಡೆಸಿದ್ದಾರೆ. ತಲೆ ಕೂದಲು ಕತ್ತರಿಸಿ, ಸುಣ್ಣ ಹಚ್ಚಿ, ಕಾರದಪುಡಿ ಎರಚಿ ದೌರ್ಜನ್ಯ ನಡೆಸಿದ್ದಾರೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಆಗಾಗ ಕಲಬುರಗಿಯಲ್ಲಿರುವ ಚಿಕ್ಕಮ್ಮನ ಮನೆಗೆ ಮಹಿಳೆ ಹೋಗುತ್ತಿದ್ದಳು. ಚಿಕ್ಕಮ್ಮನ ಅಳಿಯ ಅನಿಲ್ ಜೊತೆಗೆ ಅಕ್ರಮ ಸಂಬಂಧ ಆರೋಪದಡಿ ಮಹಿಳೆ ವಿರುದ್ಧ ಆರೋಪಿಸಿ 11 ಜನ ದೌರ್ಜನ್ಯ ಎಸಗಿದ್ದಾರೆ.
ಜೊತೆಗೆ ಮಹಿಳೆಗೆ ಜೀವ ಬೆದರಿಕೆ ಹಾಕಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ 11 ಜನ ವಿರುದ್ಧ ಪ್ರಕರಣ ದಾಖಲಾಗಿದೆ. ಕಸ್ತೂರಿಬಾಯಿ, ಡಾಕಪ್ಪ ಅವರನ್ನು ಬಂಧಿಸಲಾಗಿದ್ದು, ಇನ್ನುಳಿದ 9 ಜನ ಪರಾರಿಯಾಗಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿರುವ ಚಾವಳಿಬಾಯಿ, ತಿಪ್ಪಣ್ಣ ನಾಯಕ ಸೇರಿ 9 ಜನರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
