BREAKING : ಚಿಕ್ಕಮಗಳೂರಲ್ಲಿ ಶಾಕಿಂಗ್ ಘಟನೆ : ದೀಪಾವಳಿ ಶಾಪಿಂಗ್ ವೇಳೆ 2 ವರ್ಷದ ಮಗು ಕಿಡ್ನ್ಯಾಪ್ ಮಾಡಿದ ಮಹಿಳೆ.!

ಚಿಕ್ಕಮಗಳೂರು : ಪೋಷಕರು ದೀಪಾವಳಿ ಶಾಪಿಂಗ್ ಮಾಡುತ್ತಿದ್ದಾಗ ಮಹಿಳೆಯೊಬ್ಬಳು 2 ವರ್ಷದ ಮಗು ಕಿಡ್ನ್ಯಾಪ್ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

ಸೀತಾಪುರ ಗ್ರಾಮದ 2 ವರ್ಷದ ಹೆಣ್ಣು ಮಗು ಮಾನಸಳನ್ನು ಮಹಿಳೆ ಕಿಡ್ನ್ಯಾಪ್ ಮಾಡಿದ್ದು, ಪೋಷಕರು ಆತಂಕಗೊಂಡಿದ್ದಾರೆ.

ಮಗುವನ್ನು ಕಿಡ್ನ್ಯಾಪ್ ಮಾಡಿದ ಮಹಿಳೆ ತನ್ನ ಸೀರೆ ಸೆರಗಲ್ಲಿ ಮಗುವನ್ನು ಬಚ್ಚಿಟ್ಟುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಮಗುವಿನ ಪತ್ತೆಗೆ ಹಾಗೂ ಖತರ್ನಾಕ್ ಮಹಿಳೆಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಾಡಹಗಲೇ ಮಹಿಳೆ ಯಾರ ಭಯವಿಲ್ಲದೇ ಕಿಡ್ನ್ಯಾಪ್ ಮಾಡಿದ್ದು, ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read