ಬೆಂಗಳೂರು: ಬೆಂಗಳೂರಿನಲ್ಲಿ ತೃತೀಯ ಲಿಂಗಿ ತಲೆ ಬೋಳಿಸಿ ಮನಸ್ಸೋ ಇಚ್ಛೆ ಹಲ್ಲೆ ನಡೆಸಲಾಗಿದೆ. ಬೊಮ್ಮನಹಳ್ಳಿಯ ವಿರಾಟ ನಗರದಲ್ಲಿ ತೃತೀಯ ಲಿಂಗಿ ಸುಕನ್ಯಾ ಮೇಲೆ ಹಲ್ಲೆ ಮಾಡಲಾಗಿದೆ.
ಬೇರೆ ತಂಡದ ಜೊತೆಗೆ ಹೋಗಿದ್ದಕ್ಕೆ ಆಟೋದಲ್ಲಿ ಅಪಹರಣ ಮಾಡಿ ಹಲ್ಲೆ ಮಾಡಲಾಗಿದೆ. ತೃತೀಯ ಲಿಂಗಿಗಳಾದ ಪ್ರೀತಿ, ಚಿನ್ನಿ ಮತ್ತು ತಂಡದವರು ಕೃತ್ಯವೆಸಗಿದ್ದಾರೆ. ಹಿಟ್ಟಿನ ದೊಣ್ಣೆ, ಸೌಟು, ಕೈಗೆ ಸಿಕ್ಕ ವಸ್ತುಗಳು ಮತ್ತು ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ.
ಕೆಆರ್ ಪುರಂನಿಂದ ಅಪಹರಣ ಮಾಡಿ ಬೊಮ್ಮನಹಳ್ಳಿಗೆ ಕರೆದೊಯ್ದು ಥಳಿಸಲಾಗಿದೆ. ಕೈ ಮುಗಿದು ಬೇಡಿಕೊಂಡರೂ ತೃತೀಯ ಲಿಂಗಿ ಸುಕನ್ಯಾ ಮೇಲೆ ಹಲ್ಲೆ ನಡೆಸಲಾಗಿದೆ. ವಿಡಿಯೋ ಕಾಲ್ ಮಾಡಿ ಮತ್ತೊಬ್ಬ ತೃತೀಯ ಲಿಂಗಿಗೆ ಇದನ್ನು ತೋರಿಸಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು 7 ಜನ ತೃತೀಯ ಲಿಂಗಿಗಳನ್ನು ಬಂಧಿಸಲಾಗಿದೆ.

 
			 
		 
		 
		 
		 Loading ...
 Loading ... 
		 
		 
		