ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಲಾಸ್ಯಾ ನಾಗರಾಜ್ ಅವರ ತಾಯಿ ಮೇಲೆ ಹಲ್ಲೆ ನಡೆಸಲಾಗಿದೆ. ಲಾಸ್ಯಾ ನಾಗರಾಜ್ ತಾಯಿ ಡಾ. ಸುಧಾ ನಾಗರಾಜ್ ಅವರ ಮೇಲೆ ತಂಗಿಯಿಂದಲೇ ಹಲ್ಲೆ ನಡೆದಿದೆ. ಬೆಂಗಳೂರಿನ ಬಸವೇಶ್ವರನಗರ ನಿವಾಸದಲ್ಲಿ ಘಟನೆ ನಡೆದಿದೆ.
ಸುಧಾ ನಾಗರಾಜ್ ಅವರ ಸಹೋದರಿ ಮಂಗಳಾ ಶಶಿಧರ್ ಮತ್ತು ಅವರ ಪತಿ ಶಶಿಧರ್ ಡ್ಯಾನ್ಸ್ ಕ್ಲಾಸ್ ವಿಚಾರಕ್ಕೆ ಜಗಳವಾಡಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಒಂದೇ ಕಟ್ಟಡದಲ್ಲಿ ಎರಡೂ ಕುಟುಂಬದವರು ವಾಸವಾಗಿದ್ದಾರೆ.
ಕೆಳಮಹಡಿಯಲ್ಲಿ ಮಂಗಳಾ ವಾಸವಾಗಿದ್ದಾರೆ. ಮೇಲಿನ ನಿವಾಸದಲ್ಲಿ ಲಾಸ್ಯಾ ಮತ್ತು ಡಾ. ಸುಧಾ ಅವರು ವಾಸವಾಗಿದ್ದಾರೆ. ಗ್ರೌಂಡ್ ಫ್ಲೋರ್ ನ ಪಾರ್ಕಿಂಗ್ ಜಾಗದಲ್ಲಿ ಡ್ಯಾನ್ಸ್ ಕ್ಲಾಸ್ ನಡೆಸುವ ವಿಚಾರಕ್ಕೆ ಪದೇಪದೇ ಮಂಗಳಾ ಕಿರಿಕಿರಿ ಮಾಡುತ್ತಿದ್ದರು ಎನ್ನಲಾಗಿದೆ.
ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆಯ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ. ಲಾಸ್ಯಾ ನಾಗರಾಜ್ ಸದ್ಯ ವಿದೇಶದಲ್ಲಿದ್ದಾರೆ ಎನ್ನಲಾಗಿದೆ.