BREAKING : ರೇಣುಕಾಸ್ವಾಮಿ ಕೊಲೆ ಕೇಸ್ ; ನ್ಯಾಯಾಧೀಶರ ಮುಂದೆ ನಟ ಚಿಕ್ಕಣ್ಣ ಹೇಳಿಕೆ ದಾಖಲು.!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಧೀಶರ ಮುಂದೆ ಹಾಸ್ಯನಟ ಚಿಕ್ಕಣ್ಣ ಹೇಳಿಕೆ ದಾಖಲು ಮಾಡಲಾಗಿದೆ.

ಕೊಲೆ ನಡೆದ ದಿನ ಸ್ಪೋನಿ ಬ್ರೂಕ್ ಪಬ್ ನಲ್ಲಿ ನಟ ದರ್ಶನ್ , ಪ್ರದೋಷ್ ಜೊತೆ ಚಿಕ್ಕಣ್ಣ ಪಾರ್ಟಿ ಮಾಡಿದ್ದರು. ಈ ಹಿನ್ನೆಲೆ ಇಂದು ನ್ಯಾಯಾಧೀಶರ ಮುಂದೆ ಹಾಸ್ಯನಟ ಚಿಕ್ಕಣ್ಣ ಹೇಳಿಕೆ ದಾಖಲು ಮಾಡಲಾಗಿದೆ.

ನಟ ಚಿಕ್ಕಣ್ಣನನ್ನು 42 ನೇ ಎಸಿಎಂಎಂ ಕೋರ್ಟ್ ಮುಂದೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಪೊಲೀಸರು, ಘಟನೆಗೆ ಸಂಬಂಧಿಸಿದಂತೆ ಚಿಕ್ಕಣ್ಣ ಪೊಲೀಸರ ಮುಂದೆ ಹೇಳಿರುವ ಹೇಳಿಕೆಯನ್ನು ದಾಖಲು ಮಾಡಿಸಿದ್ದಾರೆ. ಸೆಕ್ಷನ್ ಸಿಆರ್‌ಪಿಸಿ-164 ರ ಅಡಿಯಲ್ಲಿ ಹೇಳಿಕೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪಾರ್ಟಿಯಲ್ಲಿ ರೇಣುಕಾಸ್ವಾಮಿ ಕೊಲೆ ಸಂಚಿನ ಬಗ್ಗೆ ಪ್ಲ್ಯಾನ್ ಮಾಡಲಾಗಿತ್ತು. ರೇಣುಕಾಸ್ವಾಮಿಯನ್ನು ಎಲ್ಲಿ ಕರೆತರಬೇಕು, ಹೇಗೆ ಸಾಯಿಸಬೇಕು ಎಂದು ಪಾರ್ಟಿಯಲ್ಲಿ ಡಿಸ್ಕಶನ್ ಮಾಡಲಾಗಿತ್ತು. ಆ ಪಾರ್ಟಿಯಲ್ಲಿ ನಟ ಚಿಕ್ಕಣ್ಣ ಕೂಡ ಭಾಗಿಯಾಗಿದ್ದರು.

ಪಾರ್ಟಿ ಮಾಡಿದ ಬಳಿಕ ನಟ ಚಿಕ್ಕಣ್ಣ ಸೀದಾ ಮನೆಗೆ ಹೋಗಿದ್ದರು. ಪಾರ್ಟಿ ಮುಗಿಸಿ ನಾನು ಸೀದಾ ಮನೆಗೆ ಹೋದೆ, ನಾನು ಶೆಡ್ ಗೆ ಹೋಗಿರಲಿಲ್ಲ ಎಂದು ನಟ ಚಿಕ್ಕಣ್ಣ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಇಂದು ಜಡ್ಜ್ ಮುಂದೆ ಕೂಡ ಪೊಲೀಸರು ನಟ ಚಿಕ್ಕಣ್ಣ ಹೇಳಿಕೆ ದಾಖಲಿಸಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟ ದರ್ಶನ್ & ಗ್ಯಾಂಗ್ ಸದ್ಯ ಸೆರೆಮನೆ ವಾಸ ಅನುಭವಿಸುತ್ತಿದ್ದು, ಪೊಲೀಸರು ಸದ್ಯದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read