ಬೆಂಗಳೂರು: ಬೆಂಗಳೂರು ಮಹಾನಗರದ ಹಲವು ಕಡೆ ಮಳೆಯಾಗಿದ್ದು, ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್, ಸದಾಶಿವನಗರ, ವಸಂತನಗರ, ಜಯನಗರ, ಹೆಬ್ಬಾಳ, ವಿಜಯನಗರ, ಚಂದ್ರಾ ಲೇಔಟ್, ಕೆಆರ್ ಮಾರ್ಕೆಟ್, ಬನಶಂಕರಿ, ಯಶವಂತಪುರ, ಕೋರಮಂಗಲ, ರಾಜಾಜಿನಗರ, ಶಾಂತಿನಗರ, ಜೆಸಿ ನಗರ, ಕೆಂಗೇರಿ, ಗೊರಗುಂಟೆಪಾಳ್ಯ ಸುತ್ತಮುತ್ತ ಮಳೆಯಾಗಿದೆ.
ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಫ್ಲೈಓವರ್, ಸ್ಕೈವಾಕ್ ಕೆಳಗೆ ದ್ವಿಚಕ್ರವಾಹನ ಸವಾರರು ಆಶ್ರಯ ಪಡೆದುಕೊಂಡಿದ್ದಾರೆ. ಮಳೆಯಿಂದಾಗಿ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡಿದ್ದು, ಬಹುತೇಕ ಕಡೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.