BIG UPDATE : ‘ಮೆಡಿಕಲ್ ಟೆಸ್ಟ್’ ಆಯ್ತು, ಪ್ರಜ್ವಲ್ ರೇವಣ್ಣರನ್ನ ಕೋರ್ಟ್ ಗೆ ಹಾಜರುಪಡಿಸಿದ SIT..!

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಒಂದು ತಿಂಗಳ ನಂತರ ವಿದೇಶದಿಂದ ಆಗಮಿಸಿದ್ದು, ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡರಾತ್ರಿ ಬಂದಿಳಿದ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿ ಬಂಧಿಸಿದೆ.

ನಂತರ ಇಂದು ಪ್ರಜ್ವಲ್ ರೇವಣ್ಣರನ್ನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಿದ ಎಸ್ ಐ ಟಿ ಈ ಪ್ರಕ್ರಿಯೆ ನಡೆಸಿದ ಬಳಿಕ  ಸಿವಿಲ್ ಕೋರ್ಟ್ ಗೆ ಹಾಜರುಪಡಿಸಿದೆ. ವಾದ ವಿವಾದ ಆಲಿಸುವ ಕೋರ್ಟ್ ಯಾವ ತೀರ್ಪು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಎಸ್ ಐ ಟಿ ಅಧಿಕಾರಿಗಳು ಕೇಳಿರುವ ಎಲ್ಲಾ ಪ್ರಶ್ನೆಗೂ ಪ್ರಜ್ವಲ್ ಒಂದೇ ಉತ್ತರ ನೀಡಿದ್ದು, ನಾನವನಲ್ಲ..ನಾನವನಲ್ಲ ಎಂದಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಜರ್ಮನಿಯ ಮ್ಯೂನಿಕ್ ನಗರದಿಂದ ಗುರುವಾರ ಮಧ್ಯಾಹ್ನ ಹೊರಟಿದ್ದ ಪ್ರಜ್ವಲ್ ರೇವಣ್ಣ ರಾತ್ರಿ 12:40ಕ್ಕೆ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರನ್ನು ವಶಕ್ಕೆ ಪಡೆದುಕೊಂಡ ಎಸ್ಐಟಿ ವಿಮಾನ ನಿಲ್ದಾಣದಿಂದ ಎಸ್ಐಟಿ ಕಚೇರಿಗೆ ಕರೆತಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read