ಕಾರವಾರ: ಉತ್ತರ ಕನ್ನಡ ಜಿಲ್ಲೆ ಭಟ್ಕಳದ ರಿಮ್ಸ್ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ನಿಷೇಧಿತ ಇ –ಸಿಗರೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮುಗ್ದುಂ ಕಾಲೋನಿ ನಿವಾಸಿಯಾಗಿರುವ ಅಂಗಡಿಗೆ ಮಾಲೀಕ ಮಕ್ಬುಲ್ ಬಂಧಿತ ಆರೋಪಿ. ದಾಳಿಯ ವೇಳೆ 2.39 ಲಕ್ಷ ರೂಪಾಯಿ ಮೌಲ್ಯದ ಇ- ಸಿಗರೇಟ್ ಹಾಗೂ ನಿಕೋಟಿನ್ ಲಿಕ್ವಿಡ್ ರೀಫಿಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೂವಿನ ಚೌಕ ಬಳಿ ಟೌನ್ ಸೆಂಟರ್ ನಲ್ಲಿರುವ ರಿಮ್ಸ್ ಅಂಗಡಿಯಲ್ಲಿ 51 ಇ- ಸಿಗರೇಟ್, 154 ನಿಕೋಟಿನ್ ಲಿಕ್ವಿಡ್ ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಅಂಗಡಿಯ ಮೇಲೆ ದಾಳಿ ನಡೆಸಿದ್ದಾರೆ. ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.