ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹೈಸ್ಪೀಡ್ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಜಪಾನ್ ಪ್ರಧಾನಿ ಕೂಡ ಸಾಥ್ ನೀಡಿದರು. ವಿಡಿಯೋದಲ್ಲಿ ಪ್ರಧಾನಿ ಮೋದಿ ಸಂವಾದ ನಡೆಸುತ್ತಾ ರೈಲಿನಲ್ಲಿ ಪ್ರಯಾಣಿಸುವುದನ್ನು ನೋಡಬಹುದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಶಿಗೇರು ಇಶಿಬಾ ಅವರು ಶನಿವಾರ ಟೋಕಿಯೊದಿಂದ ಸೆಂಡೈಗೆ ಶಿಂಕನ್ಸೆನ್ ಬುಲೆಟ್ ರೈಲಿನಲ್ಲಿ ಒಟ್ಟಿಗೆ ಪ್ರಯಾಣಿಸಿದರು, ಎರಡು ದಿನಗಳ ಜಪಾನ್ ಭೇಟಿಯ ಕೊನೆಯ ಹಂತದ ಭಾಗವಾಗಿ 370 ಕಿ.ಮೀ ದೂರವನ್ನು ಕ್ರಮಿಸಿದರು. ಸೆಂಡೈಗೆ ಆಗಮಿಸಿದ ಪ್ರಧಾನಿ ಮೋದಿ, ಜಪಾನೀಸ್ ರೈಲ್ವೆಯಲ್ಲಿ ತರಬೇತಿ ಪಡೆಯುತ್ತಿರುವ ಭಾರತೀಯ ಲೋಕೋ ಪೈಲಟ್ಗಳೊಂದಿಗೆ ಸಂವಾದ ನಡೆಸಿದರು. ಅವರು ನಗರಕ್ಕೆ ಕಾಲಿಡುತ್ತಿದ್ದಂತೆ ಸ್ಥಳೀಯರು “ಮೋದಿ, ಮೋದಿ ಎಂಬ ಘೋಷಣೆಗಳೊಂದಿಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
#WATCH | Prime Minister Narendra Modi reached Sendai from Tokyo in a bullet train. Japanese PM Shigeru Ishiba is also with him.
— ANI (@ANI) August 30, 2025
(Video: DD) pic.twitter.com/MZJgU5ZueS