BREAKING: ಪ್ರಯಾಣಿಕರೇ ಗಮನಿಸಿ: ಕಾಮಗಾರಿ ಹಿನ್ನೆಲೆ ಕೆಲವು ರೈಲು ಸಂಚಾರ ರದ್ದು, ಕೆಲವು ರೈಲುಗಳ ಮಾರ್ಗ ಬದಲಾವಣೆ: ಇಲ್ಲಿದೆ ಮಾಹಿತಿ

ಬೆಂಗಳೂರು: ಬೈಯ್ಯಪ್ಪನಹಳ್ಳಿ ಯಾರ್ಡ್ ಕಾಮಗಾರಿಗೆ ಸಂಬಂಧಿಸಿದಂತೆ ಬೈಯ್ಯಪ್ಪನಹಳ್ಳಿ – ಚನ್ನಸಂದ್ರ ವಿಭಾಗದ ನಡುವೆ ಲೈನ್ ಬ್ಲಾಕ್‌ ಮತ್ತು ವಿದ್ಯುತ್ ಬ್ಲಾಕ್ ಗೆ ಅನುಮತಿ ನೀಡಿರುವುದರಿಂದ ಈ ಕೆಳಕಂಡ ರೈಲು ಸೇವೆಗಳಲ್ಲಿ ಈ ಕೆಳಗಿನ ದಿನಾಂಕಗಳಂದು ಬದಲಾವಣೆಯನ್ನು ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ(South Western Railway) ಮಾಹಿತಿ ನೀಡಿದೆ, 

ರೈಲುಗಳ ರದ್ದತಿ/ಭಾಗಶಃ ರದ್ದತಿ/ಮಾರ್ಗಬದಲಾವಣೆ ಮಾಹಿತಿ ಇಂತಿದೆ.

ರೈಲುಗಳ ರದ್ದತಿ

1.ದಿನಾಂಕ 02.09.2025 ರಂದು ರೈಲು ಸಂಖ್ಯೆ 06527 ಬಂಗಾರಪೇಟೆ – ಎಸ್.ಎಂ.ವಿ.ಟಿ ಬೆಂಗಳೂರು ಮೆಮು ರೈಲು ಸೇವೆಯನ್ನು ರದ್ದುಪಡಿಸಲಾಗಿದೆ.

2. ದಿನಾಂಕ 03.09.2025 ರಂದು ರೈಲು ಸಂಖ್ಯೆ 06528 ಎಸ್.ಎಂ.ವಿ.ಟಿ ಬೆಂಗಳೂರು -ಬಂಗಾರಪೇಟೆ ಮೆಮು ರೈಲನ್ನು ರದ್ದುಪಡಿಸಲಾಗಿದೆ.

 ರೈಲಿನ ಭಾಗಶಃ ರದ್ದತಿ

1. ದಿನಾಂಕ 02.09.2025 ರಂದು ಹೊರಡುವ ರೈಲು ಸಂಖ್ಯೆ 16521 ಬಂಗಾರಪೇಟೆ -ಕೆಎಸ್ಆರ್ ಬೆಂಗಳೂರು ಮೆಮು ರೈಲು ಸೇವೆಯನ್ನು ವೈಟ್‌ಫೀಲ್ಡ್ ಮತ್ತು ಕೆಎಸ್‌ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಪಡಿಸಲಾಗಿದೆ.

 ರೈಲುಗಳ ಮಾರ್ಗ ಬದಲಾವಣೆ

1. ದಿನಾಂಕ 01.09.2025 ರಂದು ಹೊರಡುವ ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್ ಟರ್ಮಿನಸ್ – ಕೊಯಮತ್ತೂರು ಎಕ್ಸ್‌ಪ್ರೆಸ್ ರೈಲು, ಕೆಎಸ್‌ಆರ್ ಬೆಂಗಳೂರು – ಬೆಂಗಳೂರು ಕಂಟೋನ್ಮೆಂಟ್ – ಬೈಯ್ಯಪ್ಪನಹಳ್ಳಿ – ಕೃಷ್ಣರಾಜಪುರಂ – ಬಂಗಾರಪೇಟೆ – ತಿರುಪತ್ತೂರು – ಸೇಲಂ ಮಾರ್ಗವಾಗಿ ಸಂಚರಿಸಲಿದ್ದು, ಹೊಸೂರು ಮತ್ತು ಧರ್ಮಪುರಿಯಲ್ಲಿ ನಿಲುಗಡೆಯನ್ನು ರದ್ದುಪಡಿಸಲಾಗಿದೆ.

2. ದಿನಾಂಕ 02.09.2025 ರಂದು ಹೊರಡುವ ರೈಲು ಸಂಖ್ಯೆ 16236 ಮೈಸೂರು – ತೂತ್ತುಕ್ಕುಡಿ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು – ಬೆಂಗಳೂರು ಕಂಟೋನ್ಮೆಂಟ್ -ಬೈಯ್ಯಪ್ಪನಹಳ್ಳಿ – ಕೃಷ್ಣರಾಜಪುರಂ – ಬಂಗಾರಪೇಟೆ – ತಿರುಪತ್ತೂರು – ಸೇಲಂ ಮಾರ್ಗದಲ್ಲಿ ಸಂಚರಿಸಲಿದ್ದು, ಕಾರ್ಮೆಲರಾಂ, ಹೊಸೂರು, ಪಾಲಕ್ಕೋಡು, ಧರ್ಮಪುರಿ ನಿಲ್ದಾಣಗಳಲ್ಲಿ ನಿಲುಗಡೆಗಳನ್ನು ರದ್ದುಪಡಿಸಲಾಗಿದೆ.

ರೈಲುಗಳ ನಿಯಂತ್ರಣ

1. ದಿನಾಂಕ 02.09.2025 ರಂದು ಹೊರಡುವ ರೈಲು ಸಂಖ್ಯೆ 16021 ಎಂಜಿಆರ್ ಚೆನ್ನೈ ಸೆಂಟ್ರಲ್ – ಅಶೋಕಪುರಂ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗಮಧ್ಯೆ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

2. ದಿನಾಂಕ  02.09.2025 ರಂದು ಹೊರಡುವ ರೈಲು ಸಂಖ್ಯೆ 16220 ತಿರುಪತಿ – ಚಾಮರಾಜನಗರ ಎಕ್ಸ್‌ಪ್ರೆಸ್ ರೈಲನ್ನು, ಮಾರ್ಗಮಧ್ಯೆ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read