ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರಕ್ಕೆ ಪಾಕಿಸ್ತಾನ ಪ್ರಜೆ ಹಡಗಿನಲ್ಲಿ ಆಗಮಿಸಿದ್ದು, ಆತನಿಗೆ ಕೆಳಗಿಳಿಯಲು ಅಧಿಕಾರಿಗಳು ಬಿಟ್ಟಿಲ್ಲ.
ಭಾರತದ ನೆಲಕ್ಕೆ ಕಾಲಿಡಲು ಬಿಡದ ಅಧಿಕಾರಿಗಳು ಹಡಗಿ ಕ್ಯಾಪ್ಟನ್ ಮೂಲಕವೇ ಪಾಕಿಸ್ತಾನ ಪ್ರಜೆಯ ಮೊಬೈಲ್ ಸೀಜ್ ಮಾಡಿಸಿದ್ದಾರೆ. ಸರಕು ಸಾಗಾಣೆ ಹಡಗಿನಲ್ಲಿ ಕಾರವಾರ ಬಂದರಿಗೆಗೆ ಪಾಕಿಸ್ತಾನ ಪ್ರಜೆ ಆಗಮಿಸಿದ್ದ.
ಮೇ 12ರಂದು ಇರಾಕ್ ನಿಂದ ಕಾರವಾರಕ್ಕೆ ಹಡಗು ಆಗಮಿಸಿತ್ತು. ಬಿಟುಮಿನ್ ತುಂಬಿಕೊಂಡು ಆಗಮಿಸಿದ್ದ ಸರಕು ಹಡಗಿನಲ್ಲಿ 15 ಭಾರತೀಯರು, ಇಬ್ಬರು ಸಿರಿಯಾ ಪ್ರಜೆಗಳು, ಓರ್ವ ಪಾಕಿಸ್ತಾನ ಪ್ರಜೆ ಕೂಡ ಆಗಮಿಸಿದ್ದರು, ಪಾಕಿಸ್ತಾನ ಪ್ರಜೆಯ ಬಗ್ಗೆ ಬಂದರು ಇಲಾಖೆಯಿಂದ ಮಾಹಿತಿ ನೀಡಲಾಗಿದೆ.
ಕರಾವಳಿ ಕಾವಲು ಪಡೆ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿದ್ದು, ಪಾಕಿಸ್ತಾನ ಪ್ರಜೆ ಹಡಗಿನಿಂದ ಇಳಿಯದಂತೆ ಸೂಚಿಸಿದ್ದಾರೆ. ಮೊಬೈಲ್ ಸೇರಿದಂತೆ ಆತನ ದಾಖಲೆಯನ್ನು ಸೀಜ್ ಮಾಡಿಸಿದ್ದಾರೆ. ಹಡಗಿನ ಕ್ಯಾಪ್ಟನ್ ಮೂಲಕ ಮೊಬೈಲ್ ಹಾಗೂ ದಾಖಲೆಗಳನ್ನು ಸೀಜ್ ಮಾಡಿಸಲಾಗಿದೆ. ಇಂದು ಬೆಳಗ್ಗೆ ಕಾರವಾರದಿಂದ ಶಾರ್ಜಾಗೆ ಹಡಗು ತೆರಳಿದೆ.