ಮೈಸೂರು: ಟಿಪ್ಪರ್ ಡಿಕ್ಕಿಯಾಗಿ ಕಾರ್ ನಲ್ಲಿದ್ದ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದ ಬಳಿ ನಡೆದಿದೆ.
ಚಿಲ್ಕುಂದ ಗ್ರಾಮದ ತಂಬಾಕು ಮಾರುಕಟ್ಟೆಯ ಸಮೀಪ ಅಪಘಾತ ಸಂಭವಿಸಿದೆ. ಸರಗೂರು ತಾಲೂಕಿನ ತುಂಬಸೋಗೆ ಗ್ರಾಮದ ಮಲ್ಲಿಕಾರ್ಜುನ(39) ಮೃತಪಟ್ಟವರು. ಗಾಯಗೊಂಡಿರುವ ಶ್ರವಂತ್ ಮತ್ತು ಚೇತನ್ ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಅಪಘಾತ ರಭಸಕ್ಕೆ ಕಾರ್ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.