BREAKING : ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ : ಜೈಲಿನಲ್ಲಿದ್ದ 105 ಆರೋಪಿಗಳಿಗೆ ಜಾಮೀನು ಮಂಜೂರು

2022 ಏಪ್ರಿಲ್ 16 ರಂದು ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದ 105 ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.  ಹೈಕೋರ್ಟ್ ನಲ್ಲಿ ಪ್ರಕರಣದ 105 ಆರೋಪಿಗಳಿಗೆ ಜಾಮೀನು  ನೀಡಲಾಗಿದೆ.

ಈ ಹಿಂದೆ ಕೆಲವು ಬಾಲಾ ಅಪರಾಧಿಗಳು ಸೇರಿ 10ಕ್ಕೂ ಹೆಚ್ಚು ಮಂದಿಗೆ ಜಾಮೀನು ನೀಡಲಾಗಿತ್ತು. 2 ತಿಂಗಳ ಹಿಂದೆ 35 ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು.  ಇಂದು 105 ಆರೋಪಿಗಳಿಗೆ  ಹೈಕೋರ್ಟ್ ನಿಂದ  ಜಾಮೀನು ಮಂಜೂರು ಮಾಡಲಾಗಿದೆ.

ಏನಿದು ಘಟನೆ

ಯುವಕನೊಬ್ಬ ಮಸೀದಿಯ ಮೇಲೆ ಭಗವಾಧ್ವಜ ಹಾರಿಸಿ ಚಿತ್ರವೊಂದನ್ನು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ ಎಂಬ ವಿವಾದದೊಂದಿಗೆ ಇಲ್ಲಿ ಗಲಭೆ ಆರಂಭವಾಗಿತ್ತು. ನಂತರ ಪೊಲೀಸರು ಆರೋಪಿತ ಯುವಕನನ್ನು ಬಂಧಿಸಿದ್ದರು.

ಇದರಿಂದ ರೊಚ್ಚಿಗೆದ್ದ ಹಳೆ ಹುಬ್ಬಳ್ಳಿಯ ಮುಸ್ಲಿಮರು 2022ರ ಏಪ್ರಿಲ್ 16ರಂದು ರಾತ್ರಿ ಹಳೇ ಹುಬ್ಬಳ್ಳಿ ಠಾಣೆ ಎದುರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ಯುವಕನನ್ನು ತಮಗೆ ಒಪ್ಪಿಸುವಂತೆ ಗಲಾಟೆ ನಡೆಸಿದ್ದರು. ಪೊಲೀಸ್ ಠಾಣೆ ಮೇಲೆ ಕಲ್ಲಿನ ಕಲ್ಲು ತೂರಿ ದಾಂಧಲೆ ನಡೆಸಿದ್ದರು. ಆಸ್ಪತ್ರೆ, ದೇವಸ್ಥಾನ, ಮನೆಗಳ ಮೇಲೂ ಕಲ್ಲು ಎಸೆದು ದಾಂಧಲೆ ನಡೆಸಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read