BREAKING : `KEA’ ನೇಮಕಾತಿ ಪರೀಕ್ಷೆಯಲ್ಲಿ `ಹಿಜಾಬ್’ ಗೆ ನಿಷೇಧವಿಲ್ಲ : ಸಚಿವ ಸುಧಾಕರ್ ಸ್ಪಷ್ಟನೆ

 

ಬೆಂಗಳೂರು  : ನವೆಂಬರ್ 18 ಮತ್ತು 19 ರಂದು ವಿವಿಧ ನಿಗಮ ಮಂಡಳಿಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳಿಗೆ ಹಿಂದಿನಂತೆ ಹಿಜಾಬ್  ಧರಿಸಲು  ಅವಕಾಶ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.

ಈ ಕುರಿತು  ಸ್ಪಷ್ಟನೆ ನೀಡಿರುವ ಅವರು, ಕೆಇಎ ನೇಮಕಾತಿ ಪರೀಕ್ಷೆಯಲ್ಲಿ ಅನಗತ್ಯ ಕ್ಯಾಪ್ ಅಥವಾ ಸ್ಕಾರ್ಫ್‌ಗಳ ಮೇಲಿನ ನಿಷೇಧವು ಹಿಜಾಬ್‌ಗಳಿಗೆ ಅನ್ವಯಿಸುವುದಿಲ್ಲ, ಹಿಜಾಬ್ ಗಳು ಇತರ ತಲೆ ಹೊದಿಕೆಗಳಂತೆ ಅಡ್ಡಿಯಾಗುವುದಿಲ್ಲ. ಹಿಜಾಬ್ ಧರಿಸಿ ಅಭ್ಯರ್ಥಿಗಳು ಪರೀಕ್ಷಾ ಅಭ್ಯರ್ಥಿಗಳು ಪರೀಕ್ಷಾ ಅಕ್ರಮಕ್ಕೆ ಬ್ಲೂಟೂತ್ ಸಾಧನಗಳನ್ನು ಬಳಸಲು ಸಾಧ್ಯವಿಲ್ಲ. ಡ್ರೆಸ್ ಕೋಡ್ ನಿಯಮಗಳನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಹೇಳಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ  ಕಟ್ಟುನಿಟ್ಟಾದ ಭದ್ರತಾ ಕ್ರಮಗಳು ಇರಲಿವೆ. ಹಿಜಾಬ್ ಧರಿಸಿರುವ ಅಭ್ಯರ್ಥಿಗಳು 1 ಗಂಟೆ ಮುಂಚಿತವಾಗಿ ಪರೀ್ಕಷಾ ಕೇಂದ್ರಗಳಿಗೆ ವರದಿ ಮಾಡಿಕೊಳ್ಳಬೇಕು. ಅನಗತ್ಯ ಕ್ಯಾಪ್ ಅಥವಾ ಸ್ಕ್ರಾರ್ಪ್ ಗಳ್ನು ಧರಿಸುವುದು ನಿಷೇಧಿಸಲಾಗಿದೆ. ಈ ನಿಷೇಧ ಹಿಜಾಬ್ ಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read