ನವದೆಹಲಿ: ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಭಾರತವು ಫೆಬ್ರವರಿ 7 ರಂದು ಯುನೈಟೆಡ್ ಸ್ಟೇಟ್ಸ್ ವಿರುದ್ಧ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದ್ದು, ಪಂದ್ಯವು ಮುಂಬೈನಲ್ಲಿ ನಡೆಯಲಿದೆ.
ಭಾರತ ಮತ್ತು ಪಾಕಿಸ್ತಾನ 2026 ಟಿ20 ವಿಶ್ವಕಪ್‌ಗಾಗಿ ಮತ್ತೊಮ್ಮೆ ಒಂದೇ ಗುಂಪಿಗೆ ಸೇರ್ಪಡೆಗೊಂಡಿವೆ. ಏಷ್ಯಾದ ಸಾಂಪ್ರದಾಯಿಕ ಎದುರಾಳಿಗಳು ಫೆಬ್ರವರಿ 15 ರಂದು ಕೊಲಂಬೊದಲ್ಲಿ ಮುಖಾಮುಖಿಯಾಗಲಿದ್ದು, ಮತ್ತೊಂದು ಹೈ-ವೋಲ್ಟೇಜ್ ಮುಖಾಮುಖಿಗೆ ವೇದಿಕೆ ಸಿದ್ಧಪಡಿಸಲಿದ್ದಾರೆ.
ಭಾರತದ ಗ್ರೂಪ್ ಎ ಪಂದ್ಯಗಳು
ಫೆಬ್ರವರಿ 7: ಮುಂಬೈನಲ್ಲಿ ಸಂಜೆ 7:00 ಗಂಟೆಗೆ ಭಾರತ vs ಯುಎಸ್ಎ
ಫೆಬ್ರವರಿ 12: ದೆಹಲಿಯಲ್ಲಿ ಸಂಜೆ 7:00 ಗಂಟೆಗೆ ಭಾರತ vs ನಮೀಬಿಯಾ
ಫೆಬ್ರವರಿ 15: ಕೊಲಂಬೊದಲ್ಲಿ ಸಂಜೆ 7:00 ಗಂಟೆಗೆ ಭಾರತ vs ಪಾಕಿಸ್ತಾನ
ಫೆಬ್ರವರಿ 18: ಅಹಮದಾಬಾದ್‌ನಲ್ಲಿ ಸಂಜೆ 7:00 ಗಂಟೆಗೆ ಭಾರತ vs ನೆದರ್‌ಲ್ಯಾಂಡ್ಸ್
ಗ್ರೂಪ್ ಎ ವೇಳಾಪಟ್ಟಿ
ಫೆಬ್ರವರಿ 7: ಕೊಲಂಬೊದಲ್ಲಿ ಬೆಳಿಗ್ಗೆ 11:00 ಗಂಟೆಗೆ ಪಾಕಿಸ್ತಾನ vs ನೆದರ್ಲ್ಯಾಂಡ್ಸ್
ಫೆಬ್ರವರಿ 7: ಮುಂಬೈನಲ್ಲಿ ಸಂಜೆ 7:00 ಗಂಟೆಗೆ ಭಾರತ vs ಯುಎಸ್ಎ
ಫೆಬ್ರವರಿ 10: ದೆಹಲಿಯಲ್ಲಿ ಬೆಳಿಗ್ಗೆ 11:00 ಗಂಟೆಗೆ ನೆದರ್ಲ್ಯಾಂಡ್ಸ್ vs ನಮೀಬಿಯಾ
ಫೆಬ್ರವರಿ 10: ಕೊಲಂಬೊದಲ್ಲಿ ಸಂಜೆ 7:00 ಗಂಟೆಗೆ ಪಾಕಿಸ್ತಾನ vs ಯುಎಸ್ಎ
ಫೆಬ್ರವರಿ 12: ದೆಹಲಿಯಲ್ಲಿ ಸಂಜೆ 7:00 ಗಂಟೆಗೆ ಭಾರತ vs ನಮೀಬಿಯಾ
ಫೆಬ್ರವರಿ 13: ಚೆನ್ನೈನಲ್ಲಿ ಸಂಜೆ 7:00 ಗಂಟೆಗೆ ಯುಎಸ್ಎ vs ನೆದರ್ಲ್ಯಾಂಡ್ಸ್
ಫೆಬ್ರವರಿ 15: ಚೆನ್ನೈನಲ್ಲಿ ಸಂಜೆ 3:00 ಗಂಟೆಗೆ ಯುಎಸ್ಎ vs ನಮೀಬಿಯಾ
ಫೆಬ್ರವರಿ 15: ಕೊಲಂಬೊದಲ್ಲಿ ಸಂಜೆ 7:00 ಗಂಟೆಗೆ ಭಾರತ vs ಪಾಕಿಸ್ತಾನ
ಫೆಬ್ರವರಿ 18: ಕೊಲಂಬೊದಲ್ಲಿ ಮಧ್ಯಾಹ್ನ 3:00 ಗಂಟೆಗೆ ಪಾಕಿಸ್ತಾನ vs ನಮೀಬಿಯಾ
ಫೆಬ್ರವರಿ 18: ಅಹಮದಾಬಾದ್‌ನಲ್ಲಿ ಸಂಜೆ 7:00 ಗಂಟೆಗೆ ಭಾರತ vs ನೆದರ್ಲ್ಯಾಂಡ್ಸ್