ಧರ್ಮಶಾಲಾ: ಪಾಕಿಸ್ತಾನದಿಂದ ವಿವಿಧ ನಗರಗಳ ಮೇಲೆ ಡ್ರೋನ್ ದಾಳಿ ಹಿನ್ನಲೆಯಲ್ಲಿ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಐಪಿಎಲ್ ಪಂದ್ಯವನ್ನು ರದ್ದು ಮಾಡಲಾಗಿದೆ.
ದೆಹಲಿ ಮತ್ತು ಪಂಜಾಬ್ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ.
ಸ್ಟೇಡಿಯಂ ಅನ್ನು ಬ್ಲಾಕ್ ಔಟ್ ಮಾಡಲಾಗಿದ್ದು, ಕ್ರೀಡಾಂಗಣದಿಂದ ಹೊರಹೋಗುವಂತೆ ಪ್ರೇಕ್ಷಕರಿಗೆ ಆಯೋಜಕರು ಸೂಚನೆ ನೀಡಿದ್ದಾರೆ. ಪಾಕಿಸ್ತಾನದಿಂದ ಭಾರತದ ಮೇಲೆ ವಾಯು ದಾಳಿ ಹಿನ್ನೆಲೆಯಲ್ಲಿ ಐಪಿಎಲ್ ಪಂದ್ಯವನ್ನು ರದ್ದು ಮಾಡಲಾಗಿದೆ.