ಬೆಂಗಳೂರು: ರಾಜ್ಯದ ಜಮೀನುಗಳ ಭೌಗೋಳಿಕ ಮ್ಯಾಪ್ ಸಿದ್ಧಪಡಿಸಲು ಹೈಕೋರ್ಟ್ ಆದೇಶ ನೀಡಿದೆ. ಸಮಿತಿ ರಚನೆಗೆ ಸರ್ಕಾರಕ್ಕೆ ಮಹತ್ವದ ನಿರ್ದೇಶನ ನೀಡಿದ ಹೈಕೋರ್ಟ್ ಜಮೀನುಗಳ ಅಕ್ರಮ ಮಾರಾಟ, ವಂಚನೆಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದೆ.
ಇಸ್ರೋ, ಎಫ್ಎಸ್ಐ ಸೇರಿದಂತೆ ಸಂಸ್ಥೆಗಳ ನೆರವು ಪಡೆದುಕೊಳ್ಳಲು ಸೂಚನೆ ನೀಡಲಾಗಿದೆ. ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠದಿಂದ ಈ ನಿರ್ದೇಶನ ನೀಡಲಾಗಿದೆ. ಸ್ಯಾಟಲೈಟ್ ಚಿತ್ರಗಳುಳ್ಳ ಜಮೀನು, ನಿವೇಶನಗಳ ಪ್ಲಾಟ್ಫಾರ್ಮ್ ಇರಬೇಕು. ಇದರಲ್ಲಿ ಪ್ರತಿ ಜಮೀನುಗಳ ಮ್ಯಾಪ್ ಸಹಿತ ವಿವರಗಳು ಲಭ್ಯವಿರಬೇಕು ಎಂದು ಹೇಳಲಾಗಿದೆ.
ಜಮೀನುಗಳ ಅಕ್ರಮ ಮಾರಾಟ, ವಂಚನೆಗೆ ಕಡಿವಾಣ ಹಾಕಬೇಕು. ಸ್ಯಾಟಿಲೈಟ್ ಚಿತ್ರಗಳು, ಜಮೀನುಗಳ ನಿವೇಶನಗಳ ಪ್ಲಾಟ್ ಫಾರ್ಮ್ ಇರಬೇಕು. ಇದರಲ್ಲಿ ಪ್ರತಿ ಜಮೀನುಗಳ ಮ್ಯಾಪ್ ಸಹಿತ ವಿವರ ಲಭ್ಯವಾಗಿರಬೇಕು. ವಿವಾದಿತ ಜಮೀನುಗಳ ಮಾಹಿತಿಯನ್ನು ದಾಖಲಿಸಬೇಕು. ಸಬ್ ರಿಜಿಸ್ಟ್ರಾರ್ ಕಚೇರಿಗೂ ಸಂಪರ್ಕವಿದ್ದು, ಅಕ್ರಮ ನೋಂದಣಿ ತಡೆಯಬೇಕು. ಜನಸಾಮಾನ್ಯರಿಗೂ ಈ ಡಿಜಿಟಲ್ ಪ್ಲಾಟ್ಫಾರಂ ಬಳಕೆಗೆ ಲಭ್ಯವಿರಬೇಕು ಎಂದು ಹೇಳಲಾಗಿದೆ.