ಹುಬ್ಬಳ್ಳಿ: ಕರ್ನಾಟಕದಲ್ಲಿ 80 ಲಕ್ಷ ವೀರಶೈವ ಪಂಚಮಸಾಲಿ ಜನಸಂಖ್ಯೆ ಇದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕಾಗಿ ಓರ್ವ ಸ್ವಾಮೀಜಿ ಬೇಕೆಂದು 2008ರಲ್ಲಿ ಪೀಠ ಸ್ಥಾಪನೆ ಮಾಡಲಾಗಿತ್ತು. ಒಂದೇ ಪೀಠ ಆಗಬೇಕಿತ್ತು. ಆದರೆ, ನಂತರದಲ್ಲಿ ಮೂರು ಪಂಚಮಸಾಲಿ ಪೀಠಗಳಾದವು ಎಂದು ಹೇಳಿದ್ದಾರೆ.
ಇದೀಗ ಐದು ಪಂಚಮಸಾಲಿ ಪೀಠ ಮಾಡಬೇಕೆನ್ನುವ ಉದ್ದೇಶ ಇದೆ. ಮುಂದಿನ ವಾರದೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಪಂಚಮಸಾಲಿ ಸಮುದಾಯದ 100 ಪ್ರಮುಖರನ್ನು ಕರೆದು ಸಭೆ ನಡೆಸಲಾಗುವುದು. ಸಮುದಾಯದ ಪ್ರಮುಖರ ಸಭೆಯಲ್ಲಿ ಸ್ವಾಮೀಜಿಗಳು ಇರುವುದಿಲ್ಲ ಎಂದು ಹೇಳಿದ್ದಾರೆ.
ತಪ್ಪುಗಳಾಗುವುದು ಸಹಜ, ಅವುಗಳನ್ನು ತಿದ್ದಿಕೊಂಡು ಹೋಗಬೇಕು. ಮುಂದಿನ ವಾರ ಮತ್ತೆ ಎರಡು ಪಂಚಮಸಾಲಿ ಪೀಠಗಳ ಸ್ಥಾಪನೆ ಸಂಬಂಧ ಸಮುದಾಯದ ಪ್ರಮುಖರ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.