ಬೆಳಗಾವಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ಸಹಕಾರ ಸಂಘದ ಚುನಾವಣೆಯಲ್ಲಿ ಜಾರಕಿಹೊಳಿ ಕುಟುಂಬ ಮತ್ತು ಕತ್ತಿ ಕುಟುಂಬದ ನಡುವೆ ಬಿಗ್ ಫೈಟ್ ನಡೆದಿದ್ದು, ಸಹಕಾರ ಸಂಘದಲ್ಲಿ ರಮೇಶ್ ಕತ್ತಿ ಬೆಂಬಲಿತ ಆರು ಸದಸ್ಯರು ಗೆಲುವು ಸಾಧಿಸಿದ್ದಾರೆ.
ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರಿಗೆ ಮುಖಭಂಗವಾಗಿದೆ. ಸಹಕಾರಿ ಚುನಾವಣೆಯಲ್ಲಿ ಜಾರಿಹೊಳಿ ಬ್ರದರ್ಸ್ ಹೀನಾಯವಾಗಿ ಸೋಲು ಕಂಡಿದ್ದಾರೆ. ಎರಡೂ ಕುಟುಂಬಗಳ ನಡುವೆ ಪ್ರತಿಷ್ಠೆಯಾಗಿ ಚುನಾವಣೆ ಮಾರ್ಪಟ್ಟಿತ್ತು. ಪಕ್ಷಭೇದ ಮರೆತು ಜಾರಕಿಹೊಳಿ ಸಹೋದರರು ಒಗ್ಗಟ್ಟು ಪ್ರದರ್ಶಿಸಿದ್ದರು. ತಮ್ಮ ಬೆಂಬಲಿತ 15 ಅಭ್ಯರ್ಥಿಗಳಿಗೆ ಮತ ನೀಡುವಂತೆ ಪ್ರಚಾರ ನಡೆಸಿದ್ದರು.
ಸ್ವಾಭಿಮಾನಕ್ಕೆ ಮತ ನೀಡಿ ಎಂದು ಮಾಜಿ ಸಂಸದ ರಮೇಶ ಕತ್ತಿ ಪ್ರಚಾರ ನಡೆಸಿದ್ದರು. ಕೊನೆಗೂ ಹುಕ್ಕೇರಿ ತಾಲೂಕಿನ ಮತದಾರರು ರಮೇಶ್ ಕತ್ತಿ ಕೈ ಹಿಡಿದಿದ್ದಾರೆ. ಸಾಕಷ್ಟು ತಂತ್ರ ಮಾಡಿದರೂ ಸತೀಶ್ ಜಾರಕಿಹೊಳಿ ಮತ್ತು ಟೀಂ ಗೆಲುವು ಕಾಣಲು ಸಾಧ್ಯವಾಗಿಲ್ಲ. ತಮ್ಮ ಬಣದ 15 ಅಭ್ಯರ್ಥಿಗಳನ್ನು ಕತ್ತಿ ಬಳಗ ಗೆಲ್ಲಿಸಿಕೊಂಡಿದೆ.
ಬೆಂಬಲಿಗರು ಜಯಗಳಿಸಿದ ನಂತ ಹುಕ್ಕೇರಿಯಲ್ಲಿ ಸಂಭ್ರಮಾಚರಣೆ ವೇಳೆ ಕತ್ತಿ ಬೆಂಬಲಿಗರು ಹುಚ್ಚಾಟ ನಡೆಸಿದ್ದಾರೆ. ಸತೀಶ್ ಜಾರಕಿಹೊಳಿ ಬೆಂಬಲಿಗರು ಇದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಿ ಕೈಯಿಂದ ಕಾರಿಗೆ ಗುದ್ಧಿ ಕತ್ತಿ ಬೆಂಬಲಿಗರು ಹುಚ್ಚಾಟ ನಡೆಸಿದ್ದಾರೆ. ಕೂಡಲೇ ಬೆಂಬಲಿಗರನ್ನು ಹುಕ್ಕೇರಿ ಪಟ್ಟಣ ಠಾಣೆ ಪೊಲೀಸರು ಚದುರಿಸಿದ್ದಾರೆ. ಹುಕ್ಕೇರಿ ಪಟ್ಟಣದ ಬಾಪೂಜಿ ಕಾಲೇಜಿನ ಬಳಿ ಘಟನೆ ನಡೆದಿದೆ.