ಬೆಂಗಳೂರು: ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಗಾಗಿ ಪ್ರಾಥಮಿಕ ಶಾಲಾ ವಿಭಾಗದಿಂದ 20 ಶಿಕ್ಷಕರು ಮತ್ತು ಪ್ರೌಢಶಾಲಾ ವಿಭಾಗದಿಂದ 11 ಶಿಕ್ಷಕರನ್ನು (ಓರ್ವ ವಿಶೇಷ ಶಿಕ್ಷಕರೂ ಒಳಗೊಂಡಂತೆ) 2025-26 ನೇ ಸಾಲಿಗೆ ಈ ಕೆಳಕಂಡಂತೆ ಆಯ್ಕೆ ಮಾಡಲಾಗಿದೆ.
ರಾಜ್ಯ ಮಟ್ಟದ ಶಿಕ್ಷಕರ ಪ್ರಶಸ್ತಿಗೆ ಆಯ್ಕೆಯಾದ ಈ ಪುರಸ್ಕೃತರ ಪಟ್ಟಿಯಲ್ಲಿನ ಮಹಿಳಾ ಶಿಕ್ಷಕರುಗಳಿಗೆ ಅಕ್ಷರ ಮಾತೆ “ಸಾವಿತ್ರಿಬಾಯಿ ಫುಲೆ” ಇವರ ಹೆಸರಿನಲ್ಲಿ ದಿನಾಂಕ:05.09.2025 ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲು ಅನುಮತಿ ನೀಡಲಾಗಿದೆ.


