ನವದೆಹಲಿ: 26/11 ಮುಂಬೈ ದಾಳಿ ಮಾಸ್ಟರ್ ಮೈಂಡ್, ಉಗ್ರ ತಹವೂರ್ ರಾಣಾನನ್ನು ಎನ್ಐಎ ಅಧಿಕಾರಿಗಳ ತಂಡ ದೆಹಲಿಗೆ ಕರೆತಂದಿದೆ.
ಅಮೆರಿಕಾದಿಂದ ಭಾರತಕ್ಕೆ ಗಡಿಪಾರಾಗಿರುವ ಉಗ್ರ ತಹವೂರ್ ರಾಣಾನನ್ನು ಎನ್ಐಎ ಅಧಿಕಾರಿಗಳ ತಂಡ ಅಮೆರಿಕಾದಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ ಕರೆತಂದಿದೆ.
ತಹವೂರ್ ರಾಣಾ ಇರುವ ವಿಶೇಷ ವಿಮಾನ ದೆಹಲಿಯ ಪಾಲಂ ಏರ್ ಬೇಸ್ ಗೆ ಬಂದು ತಲುಪಿದೆ. 17 ವರ್ಷಗಳ ಬಳಿಕ ಮುಂಬೈ ದಾಳಿ ಮಾಸ್ಟರ್ ಮೈಂಡ್ ಭಾರತಕ್ಕೆ ಬಂದಿದ್ದಾನೆ.
2008ರ ನವೆಂಬರ್ 26ರಂದು 10 ಜನ ಪಾಕಿಸ್ತಾನಿ ಉಗ್ರರ ಗುಂಪು ಸಮುದ್ರ ಮಾರ್ಗದ ಮೂಲಕ ಮುಂಬೈಗೆ ನುಗ್ಗಿ, ರೈಲ್ವೆ ನಿಲ್ದಾಣ, ಎರದು ಐಷಾರಾಮಿ ಹೋಟೆಲ್, ಯಹೂದಿ ಕೇಂದ್ರದ ಮೇಲೆ ದಾಳಿ ನಡೆಸಿತ್ತು. ಸುಮಾರು 60 ಗಂಟೆಗಳ ಕಾಲ ನಿರಂತರವಾಗಿ ನಡೆದಿದ್ದ ಈ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ಈ ವೇಳೆ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಅಮೀರ್ ಕಸಬ್ ನನ್ನು 2012ರಲ್ಲಿ ಪುಣೆಯ ಯೆರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು. ಮುಂಬೈನಲ್ಲಿ ನಡೆದಿದ್ದ ಈ ದಾಳಿಯ ಮಾಸ್ಟರ್ ಮೈಂಡ್ ತಹವೂರ್ ರಾಣಾ ಆಗಿದ್ದು, ಅಮೆರಿಕನ್ ಪ್ರಜೆ ಡೆವಿಡ್ ಹೇಡ್ಲಿ ಅಲಿಯಾಸ್ ದಾವೂದ್ ಗಿಲಾನಿಯ ನಿಕಟ ಸಹಚರನಾಗಿದ್ದಾನೆ.