ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಮನೆಯಲ್ಲೇ 23 ವರ್ಷದ ಅಮೂಲ್ಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಅಂದ್ರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ.
ಮದುವೆಯಾದ ಮೂರು ತಿಂಗಳಿಗೆ ಗಂಡನ ಮನೆಯಲ್ಲಿ ಅಮೂಲ್ಯ ನೇಣಿಗೆ ಶರಣಾಗಿದ್ದಾರೆ. ಅಮೂಲ್ಯ ಸಾವಿಗೆ ಪತಿ ಮನೆಯವರೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಅವಳ ಗಂಡನೇ ಕೊಲೆ ಮಾಡಿ ನೇಣಿಗೆ ಹಾಕಿದ್ದಾನೆ. ವರದಕ್ಷಿಣೆ ಕಿರುಕುಳ ನೀಡಿದ್ದಾನೆ ಎಂದು ನೇಣಿಗೆ ಶರಣಾಗಿರುವ ಅಮೂಲ್ಯ ತಾಯಿ ಸುನೀತಾ ಹೇಳಿದ್ದಾರೆ. ಗಂಡನಿಗೆ ಅನುಮಾನ, ಯಾರ ಜೊತೆಯೂ ಮಾತನಾಡಲು ಬಿಡುತ್ತಿರಲಿಲ್ಲ. ಅವರ ಮನೆಯವರು ನನ್ನ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ಬ್ಯಾಡರಹಳ್ಳಿ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
