ಬೆಂಗಳೂರು: ಬೆಂಗಳೂರಿನಲ್ಲಿ ನಂದಿನಿ ಪಾರ್ಲರ್ ಬೀಗ ಮುರಿದು ಮೂರು ಲಕ್ಷ ರೂಪಾಯಿ ಕಳವು ಮಾಡಲಾಗಿದೆ. ಪೀಣ್ಯ ಪೋಲಿಸ್ ಠಾಣಾ ವ್ಯಾಪ್ತಿಯ ಎಂಟನೇ ಮೈಲಿಯಲ್ಲಿ ಘಟನೆ ನಡೆದಿದೆ.
ವಿರೂಪಾಕ್ಷ ಎಂಬವರಿಗೆ ನಂದಿನಿ ಪಾರ್ಲರ್ ಮಳಿಗೆಯ ಬೀಗ ಮುರಿದ ಮೂರು ಲಕ್ಷ ಹಣವನ್ನು ದೋಚಿದ್ದಾರೆ. ವಿರೂಪಾಕ್ಷ ಪಾರ್ಲರ್ ಲಾಕರ್ ನಲ್ಲಿ ಹಣ ಇಟ್ಟಿದ್ದರು. ಎರಡು ಬೈಕ್ ಗಳಲ್ಲಿ ಬಂದ ದುಷ್ಕರ್ಮಿಗಳು ಹಣ ದೋಚಿ ಪರಾರಿಯಾಗಿದ್ದಾರೆ. ಘಟನೆ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.