ಮಂಗಳೂರು: ಮಾಟ, ಮಂತ್ರ ನಿವಾರಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪದ ಮೇಲೆ ಮುಸ್ಲಿಂ ಧರ್ಮಗುರುವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಜೆ ಅಬ್ದುಲ್ ಕರೀಮ್ ಅಲಿಯಾಸ್ ಕೂಳೂರು ಉಸ್ತಾದ್ ಅವರನ್ನು ಬಂಧಿಸಲಾಗಿದೆ. ಮಹಿಳೆಗೆ ಮಾಟ ಮಂತ್ರ ಮಾಡಿದ್ದಾರೆ ಎಂದು ನಂಬಿಸಿದ್ದ ಆರೋಪಿ ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲದೆ ಒಂದು ಲಕ್ಷ ರೂಪಾಯಿ ಪಡೆದುಕೊಂಡು ವಂಚಿಸಿದ್ದ.
ಖಿನ್ನತೆಯ ಸಮಸ್ಯೆಯಿಂದ ಮಹಿಳೆ ಬಳಲುತ್ತಿದ್ದು, ಆಕೆಯ ಕುಟುಂಬದವರು ಹೆಜಮಾಡಿಯ ಅಬ್ದುಲ್ ಕರೀಮ್ ನನ್ನು ಭೇಟಿಯಾಗಿದ್ದರು. ಮಹಿಳೆಯನ್ನು ನೋಡಿ ಯಾರೋ ಮಾಟ ಮಾಡಿಸಿದ್ದಾರೆ ಎಂದು ನಂಬಿಸಿದ್ದ ಕರೀಮ್ ಚಿಕಿತ್ಸೆ ಕೊಡುವುದಾಗಿ ನಂಬಿಸಿ ಆಗಾಗ ಬರಲು ಹೇಳುತ್ತಿದ್ದ. ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಅಲ್ಲದೇ, ಚಿಕಿತ್ಸೆಯ ನೆಪದಲ್ಲಿ ಒಂದು ಲಕ್ಷ ರೂಪಾಯಿ ಪಡೆದು ವಂಚಿಸಿರುವುದಾಗಿಯೂ ದೂರು ನೀಡಲಾಗಿದೆ.
ಮಂಗಳೂರು ಮಹಿಳಾ ಠಾಣೆಗೆ ನೋಂದ ಮಹಿಳೆ ದೂರು ನೀಡಿದ್ದು, ತನಿಖೆ ನಡೆಸಿ ಅಬ್ದುಲ್ ಕರೀಮ್ ನನ್ನು ಪೊಲೀಸರು ಬಂಧಿಸಿದ್ದಾರೆ.