ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಡಿಸೆಂಬರ್ 12ರಂದು ‘ಡೆವಿಲ್’ ತೆರೆ ಕಾಣಲಿದೆ.
“ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು. ನೀವು ಕಾತುರದಿಂದ ಕಾಯುತ್ತಿದ್ದ TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ” ಎಂದು ತಿಳಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಅವರ ಪರವಾಗಿ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ಜಾಲತಾಣ ಖಾತೆ ನಿರ್ವಹಿಸುತ್ತಿದ್ದು, ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ‘ಡೆವಿಲ್’ ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ್ದು, ಬಿಡುಗಡೆ ದಿನಾಂಕದ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ.
‘ಡೆವಿಲ್’ ಚಿತ್ರದ ‘ಇದ್ರೆ ನೆಮ್ದಿಯಾಗ್ ಇರಬೇಕು’ ಲಿರಿಕಲ್ ಸಾಂಗ್ ಕೂಡ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಬೆನ್ನಲ್ಲೇ ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ನಲ್ಮೆಯ ಸೆಲೆಬ್ರಿಟೀಸ್, ನಿಮ್ಮ ನಿರಂತರ ಪ್ರಾರ್ಥನೆ, ಪ್ರೀತಿ ಮತ್ತು ಬೆಂಬಲಕ್ಕೆ ಅನಂತ ಧನ್ಯವಾದಗಳು 🙏
— Darshan Thoogudeepa (@dasadarshan) August 24, 2025
ನೀವು ಕಾತುರದಿಂದ ಕಾಯುತ್ತಿದ್ದ #TheDevil ಡಿಸೆಂಬರ್ 12 ರಂದು ಬಿಡುಗಡೆಯಾಗಲಿದೆ.#TheDevil is landing on 12-12-2025 🎬
My dear celebrities, thank you for your prayers, love, and endless support 🙏 pic.twitter.com/zNHQiLFcAv