ಚಾಮರಾಜನಗರ: ಚಾಮರಾಜನಗರದ ಕ್ಷೇತ್ರದ ಶಾಸಕ ಹಾಗೂ MSILನ ಅಧ್ಯಕ್ಷ ಪುಟ್ಟರಂಗ ಶೆಟ್ಟಿ ಅವರ ಹಿರಿಯ ಪುತ್ರ ಚಾಮರಾಜು ಅಕಾಲಿಕ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ, ಯಳಂದೂರು ತಾಲೂಕು ವ್ಯವಸಾಯ ಉತ್ಪನ್ನ ಮಾರಾಟಗಾರರ ಸಹಕಾರ ಸಂಘದ ನಿರ್ದೇಶಕರಾಗಿದ್ದ ಚಾಮರಾಜು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ಯಳಂದೂರು ತಾಲೂಕಿನ ಉಪ್ಪಿನ ಮೂಳೆ ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ಪುಟ್ಟರಂಗ ಶೆಟ್ಟಿ ಅವರ ಪುತ್ರ ಚಾಮರಾಜು ಅವರ ಅಕಾಲಿಕ ನಿಧನಕ್ಕೆ ಸಚಿವ ಎಂ.ಬಿ. ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಚಾಮರಾಜು ನಿಧನದ ಸುದ್ದಿ ತಿಳಿದು ಹೃದಯ ಭಾರವಾಗುತ್ತಿದೆ. ಚಾಮರಾಜು ಅವರು ವಿನಯಶೀಲ, ಸಹಾನುಭೂತಿಯುಳ್ಳ ವ್ಯಕ್ತಿತ್ವ ಹೊಂದಿದ್ದರು. ಸಮಾಜ ಸೇವೆಯತ್ತ ಅವರ ಆಸಕ್ತಿ ಮತ್ತು ಜನರಿಗಾಗಿ ಸದಾ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುತ್ತಿದ್ದವರಾಗಿ ಗುರುತಿಸಿಕೊಂಡಿದ್ದರು. ಈ ದುಃಖದ ಸಮಯದಲ್ಲಿ ಆತ್ಮೀಯರಾದ ಪುಟ್ಟರಂಗ ಶೆಟ್ಟಿ ಅವರ ಕುಟುಂಬಕ್ಕೆ, ಸ್ನೇಹಿತರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಚಾಮರಾಜನಗರದ ಕ್ಷೇತ್ರದ ಶಾಸಕರು ಹಾಗೂ MSILನ ಅಧ್ಯಕ್ಷರಾದ ಶ್ರೀಪುಟ್ಟರಂಗ ಶೆಟ್ಟಿ ಅವರ ಹಿರಿಯ ಪುತ್ರರಾದ ಚಾಮರಾಜು ಅವರ ಅಕಾಲಿಕ ನಿಧನದ ಸುದ್ದಿ ತಿಳಿದು ಹೃದಯ ಭಾರವಾಗುತ್ತಿದೆ.
— M B Patil (@MBPatil) May 12, 2025
ಚಾಮರಾಜು ಅವರು ವಿನಯಶೀಲ, ಸಹಾನುಭೂತಿಯುಳ್ಳ ವ್ಯಕ್ತಿತ್ವ ಹೊಂದಿದ್ದರು. ಸಮಾಜ ಸೇವೆಯತ್ತ ಅವರ ಆಸಕ್ತಿ ಮತ್ತು ಜನರಿಗಾಗಿ ಸದಾ ಮುಂಚೂಣಿಯಲ್ಲಿ ನಿಂತು… pic.twitter.com/yDHRh2kZnt