ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ದುಷ್ಕರ್ಮಿಗಳು ಯುವಕನಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ. ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದಾಗ ಅಶ್ರಫ್ ಆದೋನಿ ಎಂಬ ಯುವಕನಿಗೆ ಚಾಕುವಿನಿಂದ ಇರಲಾಗಿದೆ.
ಹುಬ್ಬಳ್ಳಿ ನಗರದ ಪವರ್ ಹೌಸ್ ಜಿಮ್ ಸಮೀಪ ಘಟನೆ ನಡೆದಿದೆ. ಹುಬ್ಬಳ್ಳಿಯ ಪತೇ ಶಾವಲಿ ದರ್ಗಾ ಸಂದಲ್ ಹಿನ್ನೆಲೆ ಡಿಜೆ ಹಾಕಲಾಗಿತ್ತು. ಡಿಜೆ ಸದ್ದಿಗೆ ಅಶ್ರಫ್ ಆದೋನಿ ಡ್ಯಾನ್ಸ್ ಮಾಡುತ್ತಿದ್ದ ವೇಳೆಯಲ್ಲಿ ಚಾಕುವಿನಿಂದ ಇರಿಲಾಗಿದೆ.
ಅಶ್ರಫ್ ಆದೋನಿಯ ಎದೆಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಸಬಾ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.