ವಿಜಯಪುರ: ಅಗ್ನಿ ಅವಘಡದಲ್ಲಿ 7 ಗೂಡಂಗಡಿಗಳು ಸುಟ್ಟು ಕರಗಲಾದ ಘಟನೆ ವಿಜಯಪುರದ ಚಾಲುಕ್ಯ ನಗರದ ಎಸ್ಬಿಐ ಬಳಿ ನಡೆದಿದೆ.
ಸಿಗರೇಟ್ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ಘಟನೆ ಸಂಭವಿಸಿದೆ. ಕಾಫಿ, ಟೀ, ಫುಡ್ ಸ್ಟಾಲ್ ಗಳು, ವಡಾ ಪಾವ್ ಶಾಪ್ ಗಳು ಸುಟ್ಟು ಕರಕಲಾಗಿವೆ. ಗೂಡಂಗಡಿಗಳಲ್ಲಿದ್ದ ಗ್ಯಾಸ್ ಸಿಲಿಂಡರ್ ಗಳು ಕೂಡ ಸ್ಪೋಟಗೊಂಡಿವೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
