ಮುಂಬೈ : ಮಹಾರಾಷ್ಟ್ರದ ಮುಂಬೈನ ಗ್ರಾಂಟ್ ರಸ್ತೆಯ ಕಾಮಾಟಿಪುರದ ರೆಸ್ಟೋರೆಂಟ್ನಲ್ಲಿ ಮುಂಜಾನೆ 2 ಗಂಟೆಗೆ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ಕಾಮಾಟಿಪುರದ ರೆಸ್ಟೊರೆಂಟ್ ನಲ್ಲಿ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಬೆಂಕಿಯಿಂದ ರೆಸ್ಟೊರೆಂಟ್ ಹೊತ್ತಿ ಉರಿದಿದೆ. ಬೆಂಕಿ ಎಷ್ಟು ತೀವ್ರವಾಗಿತ್ತೆಂದರೆ ಅದರ ಜ್ವಾಲೆಗಳನ್ನು ದೂರದಿಂದ ನೋಡಬಹುದು.
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಮುಂಬೈ ಅಗ್ನಿಶಾಮಕ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#WATCH | Mumbai, Maharashtra: A fire broke out at a restaurant in Kamathipura, Grant Road at 2 am. Four fire tenders are on the spot. No injuries reported so far: Mumbai Fire Service pic.twitter.com/Pi2ZhWQTwL
— ANI (@ANI) January 25, 2024