ಹಾಸನ: ಜಗಳ ಬಿಡಿಸಲು ಹೋದವನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ದೋಣನಕಟ್ಟೆ ಗ್ರಾಮದಲ್ಲಿ ನಡೆದಿದೆ
ಲಕ್ಕಪ್ಪ(48) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಅವರಿಗೆ ಚಾಕುವಿನಿಂದ ಇರಿದು ಬಸವರಾಜ ಕೊಲೆ ಮಾಡಿದ್ದಾನೆ. ಮೂವರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ವಸಂತ, ಶಶಿ, ಲಕ್ಕಪ್ಪ ಎಂಬುವರಿಗೆ ಚಾಕುವಿನಿಂದ ಇರಿಯಲಾಗಿದೆ.
ಬೆನ್ನು, ಕೈಗೆ ಚಾಕುವಿನಿಂದ ಹಲ್ಲೆ ಬಸವರಾಜ ಜೊತೆಗಿದ್ದ ನಂಜುಂಡಿ ಬೆಂಬಲಿಸಿದ್ದಾನೆ. ತಲೆಮರೆಸಿಕೊಂಡಿರುವ ಬಸವರಾಜ, ನಂಜುಂಡಿಗಾಗಿ ಹುಡುಕಾಟ ನಡೆಸಲಾಗಿದೆ. ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.