ಹೈದರಾಬಾದ್: ತೆಲಂಗಾಣದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಅತ್ತಿಗೆ, ಪತ್ನಿ, ಪುತ್ರನನ್ನು ಕೊಂದ ಬಳಿಕ ತಂದೆ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಕಾರಾಬಾದ್ ಜಿಲ್ಲೆಯ ಕುಲಕಚರ್ಲ ಪಟ್ಟಣದಲ್ಲಿ ಘಟನೆ ನಡೆದಿದೆ. ಬೇಪೂರಿ ಯಾದಯ್ಯ ಎಂಬಾತ ಕೃತ್ಯವೆಸಗಿದ್ದಾನೆ. ಮಚ್ಚಿನಿಂದ ಕೊಚ್ಚಿ ಅತ್ತಿಗೆ, ಪತ್ನಿ ಮತ್ತು ಪುತ್ರನನ್ನು ಬರ್ಬರವಾಗಿ ಕೊಲೆ ಮಾಡಿದ ಬಳಿಕ ಮನೆಯಲ್ಲಿ ನೇಣು ಬಿಗಿದುಕೊಂಡು ಬೇಪೂರಿ ಯಾದಯ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯಲ್ಲಿ ಓರ್ವ ಪುತ್ರಿ ಪಾರಾಗಿ ಜೀವ ಉಳಿಸಿಕೊಂಡಿದ್ದಾಳೆ.
