ಕೊಪ್ಪಳ: KRIDL ದಿನಗೂಲಿ ನೌಕರರ ಮನೆ ಮೇಲೆ ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಕರ ಕಳಕಪ್ಪ ನಿಡಗುಂದಿ ಮನೆಯಲ್ಲಿ ಪರಿಶೀಲನೆ ಅಂತ್ಯವಾಗಿದೆ.
ಕೊಪ್ಪಳದಲ್ಲಿ ಬರೋಬ್ಬರಿ 24 ಮನೆ ಹೊಂದಿರುವ ದಿನಗೂಲಿ ನೌಕರ ಕಳಕಪ್ಪ ನಿಡಗುಂದಿ ಆಸ್ತಿಪಾಸ್ತಿ ನೋಡಿ ಲೋಕಾಯುಕ್ತ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಕಳಕಪ್ಪ 24 ಮನೆ, 4 ನಿವೇಶನ, 40 ಎಕರೆ ಕೃಷಿ ಜಮೀನು, 350 ಗ್ರಾಂ ಚಿನ್ನಾಭರಣ ಹೊಂದಿರುವುದು ಗೊತ್ತಾಗಿದೆ. ಒಂದೂವರೆ ಕೆಜಿ ಬೆಳ್ಳಿ ಆಭರಣ, ಎರಡು ಬೈಕ್, ಎರಡು ಕಾರು ಕಳಕಪ್ಪ ಬಳಿ ಪತ್ತೆಯಾಗಿದೆ.
ಕಳಕಪ್ಪ, ಅವರ ಪತ್ನಿ ಹೆಸರಲ್ಲಿ 6 ಮನೆ, ಎರಡು ನಿವೇಶನ, 40 ಎಕರೆ ಜಮೀನು ಇದೆ. ಬೇನಾಮಿಯಾಗಿ ಅವರ ಹೆಂಡತಿ ತಮ್ಮನ ಹೆಸರಿನಲ್ಲಿ ಎಂಟು ಮನೆ, ಎರಡು ನಿವೇಶನ, ಸ್ವಂತ ಸಹೋದರನ ಹೆಸರಲ್ಲಿ 10 ಮನೆ, ವಿವಿಧ ಬ್ಯಾಂಕ್ ದಾಖಲೆ ಪತ್ತೆಯಾಗಿವೆ.
ದಿನಗೂಲಿ ನೌಕರನಾಗಿ 15 ಸಾವಿರ ಸಂಬಳ ಪಡೆಯುತ್ತಿದ್ದ ಕಳಕಪ್ಪ ಇಷ್ಟೆಲ್ಲಾ ಆಸ್ತಿ ಮಾಡಿರುವ ಬಗ್ಗೆ ದಾಖಲೆ ಸಂಗ್ರಹಿಸಿರುವ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.