ಕಲಬುರಗಿ : ಕಲಬುರಗಿಯಲ್ಲಿ ಹಾಡಹಗಲೇ ನಡೆದ ‘ಜ್ಯುವೆಲ್ಲರಿ ಶಾಪ್’ ದರೋಡೆ ಪ್ರಕರಣ ಎಲ್ಲರನ್ನ ಬೆಚ್ಚಿ ಬೀಳಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕದ್ದಿದ್ದ ಚಿನ್ನಾಭರಣ ಮಾರಾಟ ಮಾಡಿಸಿ ಹಣ ಕೊಡಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಹೈದರಾಬಾದ್ ಮೂಲದವರು ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕಲಬುರಗಿ ನಗರದ ಸರಾಫ್ ಬಜಾರ್ ನಲ್ಲಿ ಜ್ಯುವೆಲ್ಲರಿ ಶಾಪ್ ಗೆ ಗನ್ ಹಿಡಿದು ನುಗ್ಗಿದ ಖದೀಮರು 2-3 ಕೆಜಿ ಚಿನ್ನ ದೋಚಿ ಎಸ್ಕೇಪ್ ಆಗಿದ್ದರು. ತಲೆಗೆ ಕ್ಯಾಪ್, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದು ದರೋಡೆ ಮಾಡಿದ್ದರು.
ಅಂಗಡಿಯಲ್ಲಿ 2-3 ಕೆಜಿ ಚಿನ್ನ ದರೋಡೆಯಾಗಿದೆ. ದರೋಡೆ ಪ್ರಕರಣದ ತನಿಖೆಗೆ 5 ವಿಶೇಷ ತಂಡ ರಚನೆಯಾಗಿದೆ. ಆದಷ್ಟು ಬೇಗ ಖದೀಮರನ್ನು ಹಿಡಿಯುತ್ತೇವೆ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಹೇಳಿದ್ದರು.
TAGGED:ಕಲಬುರಗಿ