ಬೆಂಗಳೂರು: ‘ಲ್ಯಾಂಡ್ ಲಾರ್ಡ್’ ಟೀಸರ್ ಲಾಂಚ್ ವೇಳೆ ನಟಿ ರಚಿತಾರಾಮ್ ಮಾತನಾಡುತ್ತಿದ್ದ ವೇಳೆಯಲ್ಲಿ ‘ಜೈ ಡಿ ಬಾಸ್’ ಎಂದು ದರ್ಶನ್ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಇದಕ್ಕೆ ನಟಿ ರಚಿತರಾಮ್ ಬೇಸರ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದ ವೇದಿಕೆಯಲ್ಲಿ ಅರ್ಧದಲ್ಲಿಯೇ ರಚಿತರಾಮ್ ಮಾತು ನಿಲ್ಲಿಸಿದ್ದಾರೆ.
ರಚಿತಾರಾಮ್ ಅವರು ಮಾತನಾಡುವಾಗ ದರ್ಶನ್ ಅಭಿಮಾನಿಗಳು ಜೈ ಡಿ ಬಾಸ್ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ರಚಿತಾ ರಾಮ್ ಅವರು, ನಾನು ಮಾತನಾಡುತ್ತೇನೆ. ನಾನು ಮಾತನಾಡಿ ಮುಗಿಸುತ್ತೇನೆ ಎಂದಿದ್ದಾರೆ. ಆದರೂ ಅಭಿಮಾನಿಗಳು ಘೋಷಣೆ ಕೂಗಿದ್ದಾರೆ. ಇದರಿಂದ ರಚಿತಾರಾಮ್ ಅವರು ಬೇಸರದಿಂದ ಅರ್ಧದಲ್ಲೇ ಮಾತು ನಿಲ್ಲಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ನವರಂಗ್ ಥಿಯೇಟರ್ ನಲ್ಲಿ ಇಂದು ನಟ ‘ದುನಿಯಾ’ ವಿಜಯ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.
