BREAKING : ಇಸ್ರೋದ `ಗಗನಯಾನ’ ನೌಕೆಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಹೈದರಾಬಾದ್ :  ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್​​ ಬಾಹ್ಯಾಕಾಶ ಕೇಂದ್ರದಿಂದ, ಇಸ್ರೋದ ಗಗನಯಾನ ಯೋಜನೆಯ  ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಇಸ್ರೋ ಮುಖ್ಯಸ್ಥ ಸೋಮನಾಥ್ ಅವರು ಮಾಹಿತಿ ನೀಡಿದ್ದು,  ಟೆಸ್ಟ್ ವೆಹಿಕಲ್ ಲಿಫ್ಟ್ ಆಫ್ ಇಂದು ಯಶಸ್ವಿಯಾಗಿದ್ದು,  ವಾಹನ ಸುರಕ್ಷಿತವಾಗಿದೆ. ನಿರೀಕ್ಷಿತ ಉಡಾವಣೆಯಾಗಿದೆ ಎಂದು ತಿಳಿಸಿದ್ದಾರೆ.

ಏನಿದು ಗಗನಯಾನ ಮಿಷನ್?

ಗಗನಯಾನ ಮಿಷನ್ನ ಪ್ರಾಥಮಿಕ ಗುರಿ ಮಾನವರನ್ನು ಬಾಹ್ಯಾಕಾಶಕ್ಕೆ ಉಡಾಯಿಸುವುದು, ಮೂರು ದಿನಗಳ ಕಾರ್ಯಾಚರಣೆಗಾಗಿ ಅವರನ್ನು 400 ಕಿಲೋಮೀಟರ್ ಎತ್ತರದಲ್ಲಿ ಭೂಮಿಯ ಕೆಳ ಕಕ್ಷೆಯಲ್ಲಿ ಇರಿಸುವುದು, 2025 ರಲ್ಲಿ ಸುರಕ್ಷಿತವಾಗಿ ಭೂಮಿಗೆ ಮರಳುವುದು.

ಗಗನಯಾನ ಮಿಷನ್ನ ಸಿಬ್ಬಂದಿಯನ್ನು ಎಲ್ವಿಎಂ 3 ರಾಕೆಟ್ ಬಳಸಿ ಗೊತ್ತುಪಡಿಸಿದ ಕಕ್ಷೆಗೆ ಸಾಗಿಸಲಾಗುವುದು. ಈ ರಾಕೆಟ್ ಘನ, ದ್ರವ ಮತ್ತು ಕ್ರಯೋಜೆನಿಕ್ ಪ್ರೊಪಲ್ಷನ್ ವ್ಯವಸ್ಥೆಗಳು ಸೇರಿದಂತೆ ವಿವಿಧ ಹಂತಗಳನ್ನು ಒಳಗೊಂಡಿದೆ.

 

https://twitter.com/DDIndialive/status/1715588293319094630?ref_src=twsrc%5Egoogle%7Ctwcamp%5Eserp%7Ctwgr%5Etweet

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read