ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಎಲ್ಲರೂ ತಮ್ಮ ಊರುಗಳಿಗೆ ಮರಳಲು ಸಜ್ಜಾಗುತ್ತಿದ್ದಾರೆ. ಟಿಕೆಟ್ ಬುಕ್ ಮಾಡಲು ಸಜ್ಜಾಗುತ್ತಿದ್ದಾರೆ.
ಈ ನಡುವೆ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್ಸಿಟಿಸಿ) ವೆಬ್ಸೈಟ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಕೆಲಕಾಲ ಪರದಾಡಿದ್ದಾರೆ.ಹಬ್ಬದ ಸರಿಯಾದ ಸಮಯದಲ್ಲಿ ಇದು ಸಂಭವಿಸಿದೆ ಎಂದು ಪ್ರಯಾಣಿಕರು ಗರಂ ಆಗಿದ್ದಾರೆ.
ಮುಂಬರುವ ದೀಪಾವಳಿ ಮತ್ತು ಛತ್ ಪೂಜಾ ರಜಾದಿನಗಳಲ್ಲಿ ಪ್ರಯಾಣಕ್ಕಾಗಿ ರೈಲು ಟಿಕೆಟ್ಗಳನ್ನು ಬುಕ್ ಮಾಡಲು ಪ್ರಯತ್ನಿಸುತ್ತಿದ್ದ ಸಾವಿರಾರು ಬಳಕೆದಾರರಿಗೆ IRCTC ವೆಬ್ಸೈಟ್ ಡೌನ್ ಆಗಿದೆ ಎಂದು ವರದಿಯಾಗಿದೆ. ಡೌನ್ಡೆಕ್ಟರ್ ಪ್ರಕಾರ, ಎರಡು ಗಂಟೆಗಳಲ್ಲಿ IRCTC ವ್ಯತ್ಯಯದ ದೂರುಗಳು ಹೆಚ್ಚಾಗಿವೆ.
IRCTC की सर्विस सबसे घटिया है
— Sravan Yadav (@yadavsravana) October 17, 2025
दिवाली पर घर जाने के लिए तत्काल टिकट बुक करना शुरू किया. जैसे ही साइट ओपेन करता हूं यह मैसेज दिखने लगता है कि अभी मेंटेनेंस चल रहा है. सर्वर हमेशा डाउन रहता है.
साईट 15 मिनट बाद ओपेन होती है जैसे ही डिटेल्स भरकर पेमेंट करने तक 5 मिनट लग गया क्यों… pic.twitter.com/njlGjL1fgA