BREAKING : ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಮೋಸ್ಟ್ ವಾಟೆಂಡ್ ಮೂವರು ‘LET’ ಉಗ್ರರು ಫಿನೀಶ್ |Operation Sindoor

ನವದೆಹಲಿ : ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ದಾಳಿಗೆ ಮೂವರು ಮೋಸ್ಟ್ ವಾಟೆಂಡ್ ಎಲ್ ಇ ಟಿ ಉಗ್ರರು ಫಿನೀಶ್ ಆಗಿದ್ದಾರೆ.

ಹೌದು, ಈ ದಾಳಿಯಲ್ಲಿ ಪಾಕಿಸ್ತಾನದ ಮೋಸ್ಟ್ ವಾಟೆಂಡ್ ಎಲ್ ಇ ಟಿ ಉಗ್ರ ಅಬ್ದುಲ್ ಮಲೀಕ್ ಹಾಗೂ ಎಲ್ ಇ ಟಿ ಕಮಾಂಡರ್ ಮುದಾಸೀರ್ ಹಾಗೂ ಮತ್ತೋರ್ವ ಉಗ್ರ ಬದ್ರುದ್ದೀನ್ ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ನಂತಹ ಭಯೋತ್ಪಾದಕ ಸಂಘಟನೆಗಳು ಭಯೋತ್ಪಾದಕರಿಗೆ ತರಬೇತಿ ನೀಡಲು ಮತ್ತು ಅಡಗುತಾಣಗಳಾಗಿ ಬಳಸುತ್ತಿದ್ದ ಪಾಕಿಸ್ತಾನದ ಮೂಲಸೌಕರ್ಯಗಳನ್ನು ಆಪರೇಷನ್ ಸಿಂಧೂರ್ ಮೂಲಕ ಭಾರತ ನಿಖರವಾಗಿ ಗುರಿಯಾಗಿಸಿಕೊಂಡಿದೆ.
ಮರ್ಕಜ್ ಸುಭಾನ್ ಅಲ್ಲಾಹ್ ಪಾಕಿಸ್ತಾನದ ಪಂಜಾಬ್ನ ಬಹವಾಲ್ಪುರದಲ್ಲಿ ಜೈಶ್-ಎ-ಮೊಹಮ್ಮದ್ನ ಕಾರ್ಯಾಚರಣೆಯ ಪ್ರಧಾನ ಕಚೇರಿಯಾಗಿದೆ. ಪುಲ್ವಾಮಾ ದಾಳಿಯ ದುಷ್ಕರ್ಮಿಗಳಿಗೆ ಈ ಶಿಬಿರದಲ್ಲಿ ತರಬೇತಿ ನೀಡಲಾಯಿತು. ಇದು ಭಾರತದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ಹತ್ತಿರದ ಗಡಿಗಳನ್ನು ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read