ಕೊಪ್ಪಳ: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಿಡಿಯೋಗೆ ಹುಸೇನಿ ಕ್ಷಮೆಯಾಚಿಸಿದ್ದಾನೆ. ಯತ್ನಾಳ್ ವಿರುದ್ಧ ವಿಡಿಯೋ ಹರಿಬಿಟ್ಟಿದ್ದ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ಹುಸೇನಿ ಕ್ಷಮೆಯಾಚಿಸಿದ್ದಾನೆ.
ಮುಸಲಾಪುರದಲ್ಲಿ ಜಮಾವಣೆಗೊಂಡಿದ್ದ ಯತ್ನಾಳ ಅಭಿಮಾನಿಗಳು ಕ್ರಮಕ್ಕೆ ಒತ್ತಾಯಿಸಿದ್ದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹುಸೇನಿ ಕ್ಷಮೆಯಾಚಿಸಿದ್ದಾನೆ. ಬೂಟ್ ನೆಕ್ಕಿದ ವಂಶಸ್ಥ ಎಂದಿದ್ದು ತಪ್ಪಾಗಿದೆ. ಕ್ಷಮಿಸಿ. ಇನ್ನುಮುಂದೆ ಯಾವುದೇ ಜಾತಿ, ಧರ್ಮದ ಬಗ್ಗೆ ಮಾತನಾಡುವುದಿಲ್ಲ. ದಯವಿಟ್ಟು ಕ್ಷಮಿಸಿ ಎಂದು ಕಣ್ಣೀರಿಟ್ಟು ಹುಸೇನಿ ಕ್ಷಮೆಯಾಚಿಸಿದ್ದಾನೆ.
ಯತ್ನಾಳ್ ವಿರುದ್ಧ ಅನ್ಯಕೋಮಿನ ಯುವಕ ಹರಿಬಿಟ್ಟ ವಿಡಿಯೋ ವೈರಲ್ ಆಗುತ್ತಿದ್ದಂತೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆಜಾನ್ ಕುರಿತು ಅಧಿವೇಶನದಲ್ಲಿ ಶಾಸಕ ಯತ್ನಾಳ್ ಮಾತನಾಡಿದ್ದನ್ನು ಪ್ರಸ್ತಾಪಿಸಿ ಯತ್ನಾಳ್ ಹೇಳಿಕೆ ಖಂಡಿಸಿ ನೀನು ಬೂಟು ನೆಕ್ಕಿದ ವಂಶಸ್ಥ ಎಂದು ನಾಲಗೆ ಹರಿಬಿಟ್ಟಿದ್ದ. ಮುಸಲಾಪುರದಲ್ಲಿ ಶಾಸಕ ಯತ್ನಾಳ್ ಅಭಿಮಾನಿಗಳು, ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಮಾವಣೆಗೊಂಡು ವಿಡಿಯೋ ಹರಿಬಿಟ್ಟಿರುವ ಹುಸೇನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆ ಕನಕಗಿರಿ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಕ್ರಮಕೈಗೊಂಡಿದ್ದರು.