ಹಾವೇರಿ : ಕೌಟುಂಬಿಕ ಕಲಹಕ್ಕೆ ಜಗಳ ನಡೆದು ಪತ್ನಿಯನ್ನು ಕೊಂದು ಕೆರೆಗೆ ಹಾರಿ ಪತಿ ಆತ್ಮಹತ್ಯೆ ಮಾಡಿಕೊಂಡ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪತ್ನಿ ಲಲಿತವ್ವ (55) ಕೊಂದು ಪತಿ ಸಿದ್ದಪ್ಪ ಡಬ್ಬಣ್ಣನವರ (60) ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಿನ್ನೆ ರಾತ್ರಿ ಗಂಡ-ಹೆಂಡತಿ ನಡುವೆ ಜಗಳ ನಡುವೆ ನಡೆದಿದ್ದು, ಜಗಳ ತಾರಕಕ್ಕೇರಿ ಪತ್ನಿ ಲಲಿತವ್ವನನ್ನು ಕೊಲೆ ಮಾಡಿ ಸಿದ್ದಪ್ಪ ಕೆರೆಗೆ ಹಾರಿ ಸೂಸೈಡ್ ಮಾಡಿಕೊಂಡಿದ್ದಾನೆ. ಘಟನೆ ಸಂಬಂಧ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You Might Also Like
TAGGED:ಹಾವೇರಿ