BREAKING : BBMP ಅಧಿಕಾರಿ ‘ಬಸವರಾಜ ಮಾಗಿ’ ನಿವಾಸದಲ್ಲಿ ಭಾರಿ ಚಿನ್ನಾಭರಣ, 2 ಹುಲಿ ಉಗುರು ಪತ್ತೆ..!

ಬೆಂಗಳೂರು : ಬಿಬಿಎಂಪಿ ಅಧಿಕಾರಿ ಬಸವರಾಜ ಮಾಗಿ ನಿವಾಸದಲ್ಲಿ ಭಾರಿ ಚಿನ್ನಾಭರಣ ಪತ್ತೆಯಾಗಿದ್ದು, ಇದರ ಜೊತೆಗೆ 2 ಹುಲಿ ಉಗುರು ಕೂಡ ಪತ್ತೆಯಾಗಿದೆ.

ಇಂದು ಲೋಕಾಯುಕ್ತ ಅಧಿಕಾರಿಗಳು  ಬೆಂಗಳೂರಿನ   ಬಸವರಾಜ ಮಾಗಿ ನಿವಾಸದಲ್ಲಿ ಶೋಧ ನಡೆಸಿದ್ದು, ಕಂತೆ ಕಂತೆ ಹಣ, ಭಾರಿ ಚಿನ್ನಾಭರಣಗಳು, 2 ಹುಲಿ ಉಗುರು ಪತ್ತೆಯಾಗಿದೆ. ಕೆಲಸಕ್ಕೆ ಸೇರಿ ಕೆಲವೇ ಕೆಲವು ವರ್ಷಗಳಲ್ಲಿ ಬಿಬಿಎಂಪಿ ಅಧಿಕಾರಿ ಬಸವರಾಜ ಮಾಗಿ ಕೋಟಿಗಟ್ಟಲೇ ಆಸ್ತಿ ಸಂಪಾದಿಸಿದ್ದು, ಅಲ್ಲದೇ ಈತ ಬೆಂಗಳೂರಿನ ಹಲವು ಕಡೆ ಫ್ಲ್ಯಾಟ್, ಫಾರ್ಮ್ ಹೌಸ್ ನಿರ್ಮಿಸಿರುವುದು ಕೂಡ ಬಯಲಾಗಿದೆ.

ಬಸವರಾಜ ಮಾಗಿ ನಿವಾಸದಲ್ಲಿ ತಲ್ವಾರ್, ಡ್ರ್ಯಾಗರ್ ಕೂಡ ಪತ್ತೆಯಾಗಿದೆ.ಅಲ್ಲದೇ 12.50 ಲಕ್ಷದ ಕ್ಯಾಸಿನೋ ಕಾಯಿನ್ಸ್ ಗಳು ಕೂಡ ಪತ್ತೆಯಾಗಿದೆ.  ಇಂದು ಬೆಂಗಳೂರಿನ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read