BREAKING : ಗದಗದಲ್ಲಿ ಮಾಜಿ ಪ್ರೇಮಿಯಿಂದ ಬ್ಲ್ಯಾಕ್ ಮೇಲ್ :  ಮದುವೆ ಸಂಭ್ರಮದಲ್ಲಿದ್ದ ಯುವತಿ  ನೇಣು ಬಿಗಿದುಕೊಂಡು ಆತ್ಮಹತ್ಯೆ.!

ಗದಗ : ಮದುವೆ ಸಂಭ್ರಮದಲ್ಲಿದ್ದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ತಾಲೂಕಿನ ಅಸುಂಡಿಯಲ್ಲಿ ನಡೆದಿದೆ.

ಸಾಯಿರಾಬಾನು ನದಾಫ್ (29) ಎಂಬ ಯುವತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿಟ್ಟು ಸಾಯಿರಾಬಾನು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ.

ಮೇ 8 ರಂದು ಸಾಯಿರಾಬಾನು ಮದುವೆ ನಿಗದಿಯಾಗಿತ್ತು, ಮೈಲಾರಿ ಎಂಬ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಸೂಸೈಡ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

5 ವರ್ಷಗಳ ಹಿಂದೆ ಮೈಲಾರಿ ಎಂಬ ಯುವಕನ ಜೊತೆ ಈಕೆಗೆ ಲವ್ ಆಗಿ ಬ್ರೇಕಪ್ ಆಗಿತ್ತು, ನಂತರ ಮೈಲಾರಿ ಮದುವೆ ಆಗಲು ಕಿರುಕುಳ ನೀಡುತ್ತಿದ್ದನು. ನನ್ನನ್ನು ಮದುವೆ ಆಗದೇ ಇದ್ದರೆ ನನ್ನ ಜೊತೆ ಇರುವ ನಿನ್ನ ಫೋಟೋ. ವೀಡಿಯೋ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದನು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read