ಕಲಬುರಗಿ : ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಮೃತಪಟ್ಟ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರದ ಬೇಳಕೋಟ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಆಸಿಫ್ ಅಹ್ಮದ್ ಶೇಕ್ (43) ಹಾಗೂ ಮೊಹಮ್ಮದ್ ನಿಜಾಮ್ ಚೋಟುಮಿಯಾ (30) ಎಂದು ಗುರುತಿಸಲಾಗಿದೆ.
ಡ್ಯಾಂ ನೋಡಲು ಆರು ಜನ ಸ್ನೇಹಿತರು ಒಟ್ಟಾಗಿ ಕಲಬುರಗಿಯಿಂದ ಬೇಳಕೋಟ ಗ್ರಾಮಕ್ಕೆ ಬಂದಿದ್ದರು. ಮೃತದೇಹಗಳಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಎಸ್ ಡಿ ಆರ್ ಎಫ್ ಶೋಧ ನಡೆಸುತ್ತಿದೆ. ಘಟನೆ ಸಂಬಂಧ ಮಹಾಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.