SHOCKING : ಯುವಜನರಲ್ಲಿ ಹೆಚ್ಚುತ್ತಿದೆ ಹೃದಯಾಘಾತ : ಉಜಿರೆಯಲ್ಲಿ 29 ವರ್ಷದ ಯುವಕ ಸಾವು..!

ದಕ್ಷಿಣ ಕನ್ನಡ : ಇತ್ತೀಚೆಗಂತೂ ಯುವಜನರಲ್ಲಿ ಹೃದಯಾಘಾತ ಹೆಚ್ಚಳವಾಗುತ್ತಿದ್ದು, ಆತಂಕ ಮನೆ ಮಾಡಿದೆ.

ಜರ್ಮನಿಯ ಸಾಫ್ಟ್ವೇರ್ ಎಂಜಿನಿಯರ್ ಅತ್ತಾಜೆ ಅದಿತ್ಯ ಭಟ್ (29) ಹೃದಯಾಘಾತದಿಂದ ನಿಧನರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಅತ್ತಾಜೆಯಲ್ಲಿ ನಡೆದಿದೆ. ಅತ್ತಾಜೆಯ ಮನೆಯಲ್ಲಿ ಆಯುಧಪೂಜೆ ನಡೆಯುತ್ತಿದ್ದ ವೇಳೆ ಎದೆನೋವು ಕಾಣಿಸಿಕೊಂಡಿದ್ದು, ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದಾರೆ.

ಆರೋಗ್ಯವಂತ ಹೃದಯವಂತ ಗಟ್ಟಿಮುಟ್ಟು ಯುವಕರು, ಮಕ್ಕಳೇ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ?
ಇದಕ್ಕೆ ಲೈಫ್ ಸ್ಟೈಲ್? ಕಲಬೆರಕೆ ಆಹಾರ ಕಾರಣವೇ..? ಇದಕ್ಕೆ ಕಾರಣ ತಿಳಿದು ಅದರನುಸಾರ ಹೋದರೆ ಯುವಜನರ ಆರೋಗ್ಯ ಉಳಿಸಿಕೊಳ್ಳಬಹುದು ಎಂದು ಪತ್ರಕರ್ತ ಜಿತೇಂದ್ರ ಕುಂದೇಶ್ವರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read